ಕುಮಟಾ: ಇಲ್ಲಿಯ ರೋಟರಿ ಪ್ರವರ್ತಿತ ಉತ್ತರ ಕನ್ನಡ ಬ್ಲಡ್ ಬ್ಯಾಂಕಿನ ಶಾಶ್ವತ ಆಕ್ಸಿಜನ್ ಬ್ಯಾಂಕಿಗೆ ೨ ಲಕ್ಷ ರು. ಮೌಲ್ಯದ ಒಟ್ಟೂ ಮೂರು ಆಕ್ಸಿಜನ್ ಕಾನ್ಸಂಟ್ರೇಶನ್ ಅನ್ನು ಕುಮಟಾ ರೋಟರಿ ಸಂಸ್ಥೆಯು ಬ್ಲಡ್ ಬ್ಯಾಂಕಿನ ಸಭಾಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೀಡಿದೆ.

RELATED ARTICLES  ಕುಮಟಾ ಕನ್ನಡ ಸಂಘದ ಜನನುಡಿ ಸಾಹಿತ್ಯ ಸಮ್ಮೇಳನ ನ.30ಕ್ಕೆ : ಸದಾನಂದ ದೇಶಭಂಡಾರಿ

ರೋಟರಿ ಕ್ಲಬ್ ಅಧ್ಯಕ್ಷ ಶಶಿಕಾಂತ ಕೊಳೇಕರ ಅವರು ಬ್ಲಡ್ ಬ್ಯಾಂಕಿನ ವ್ಯವಸ್ಥಾಪಕ ಡಾ.ಎಂ.ವಿ.ಮೂಡ್ಲಗಿರಿ ಅವರಿಗೆ ಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರಿಸುವ ಮೂಲಕ ರೋಟರಿ ಸದಾ ಸೇವೆಗೆ ಸಿದ್ಧವಿರುವುದನ್ನು ದೃಢಪಡಿಸಿದರು. ಕಾರ್ಯದರ್ಶಿ ಅತುಲ್ ಕಾಮತ ಬ್ಲಡ್ ಬ್ಯಾಂಕಿಗೆ ಅಗತ್ಯ ಸಾಮಗ್ರಿಗಳನ್ನು ಆಗಾಗ ಪೂರೈಸುವ ರೋಟರಿಯ ಕ್ಷಮತೆಯ ಕುರಿತು ಮಾತನಾಡಿದರು. ರೋಟರಿಯ ನಿಯೋಜಿತ ಅಧ್ಯಕ್ಷೆ ಡಾ. ನಮೃತಾ ಶಾನಭಾಗ ವಂದಿಸಿದರು. ಈ ಸಂದರ್ಭದಲ್ಲಿ ರೋಟರಿಯ ಎಂ.ಬಿ.ಪೈ, ಜಯವಿಠ್ಠಲ ಕುಬಾಲ, ಕಿರಣ ನಾಯಕ, ವಿನಾಯಕ ಹೆಗಡೆ, ಜಯಶ್ರೀ ಕಾಮತ, ಶಿಲ್ಪಾ ಜಿನರಾಜ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಭಟ್ಕಳದಲ್ಲಿ ಎಲ್.ಕೆ.ಜಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ