ಕುಮಟಾ : ಇತ್ತೀಚೆಗೆ ಅನಾರೋಗ್ಯದಿಂದ ಮೃತರಾದ ಮಂಜುನಾಥ ತಿಮ್ಮಣ್ಣ ಗೌಡ ವಾಲಗಳ್ಳಿ ಇವರಿಗೆ ನುಡಿನಮನ ಕಾರ್ಯಕ್ರಮವನ್ನು ಅವರ ವೈಕುಂಠ ಸಮಾರಾಧನೆಯ ದಿನದಂದು ಜೂನ್ ೧೯ ಶನಿವಾರ ಸಂಜೆ ಐದುಗಂಟೆಯಿಂದ ಅಂತರ್ಜಾಲ ಮಾಧ್ಯಮದ ಮೂಲಕ ನುಡಿನಮನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಾಲಗಳ್ಳಿ ಗ್ರಾಮ ಪಂಚಾಯತದ ಅಧ್ಯಕ್ಷರಾದ ಸುಬ್ರಾಯ ಶಾನಭಾಗ,ದೇವಗಿರಿ ಗ್ರಾಮ ಪಂಚಾಯತದ ಉಪಾಧ್ಯಕ್ಷರಾದ ಎಸ್ ಟಿ ನಾಯ್ಕ ,ಯುವ ಒಕ್ಕೂಟದ ಅಧ್ಯಕ್ಷ ಸೂರಜ್ ನಾಯ್ಕ ಸೋನಿ,ಹಾಲಕ್ಕಿ ಸಮಾಜವ ಪ್ರಮುಖರಾದ ಗೋವಿಂದ ಗೌಡ,ಸುಬ್ರಾಯ ಗೌಡ,ಶಿಕ್ಷಕರಾದ ಡಾಕ್ಟರ್ ರವೀಂದ್ರ ಭಟ್ಟಸೂರಿ,ನಿವೃತ್ತ ಉಪನ್ಯಾಸಕರಾದ ಎಸ್ ಪಿ ಗೌಡ ಬಿಣಗಾ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾಕ್ಟರ್ ಶ್ರೀಧರ ಗೌಡ ಉಪ್ಪಿನ ಗಣಪತಿ, ಗಣೇಶ್ ಪಟಗಾರ, ನಿತ್ಯಾನಂದ ಗೋಳಿ ನಾಯ್ಕ.,ಮಂಜುನಾಥ ಗೌಡರ ಜಿಕ್ಕಪ್ಪ ಜಂಗಾ ಗೌಡ, ಕಾರ್ಯಕ್ರಮದ ಸಂಘಟಕ ಗಣೇಶ ಅಂಬಿಗ ಮುಂತಾದವರು ನುಡಿನಮನಗಳನ್ನು ಸಲ್ಲಿಸಿದರು.

RELATED ARTICLES  ಮಾರುಕಟ್ಟೆ ವಿಚಾರದಲ್ಲಿ ಅಧಿಕಾರಿಗಳು ಮೀನುಗಾರರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ: ಮಾಜಿ ಶಾಸಕ ಸತೀಶ್ ಸೈಲ್

ಈ ವೇಳೆ ಮಾತನಾಡಿದ ಎಲ್ಲರೂ ದಿವಂಗತ ಮಂಜುನಾಥ ಗೌಡರು ಯುವಜನ ಮೇಳ ಹಾಗೂ ಕುಮಟಾ ಹಬ್ಬದ ಸಂಘಟನೆಯ ವೇಳೆ ಸಕ್ರಿಯವಾಗಿ ಪಾಲ್ಗೊಂಡವರು.ಬಹಳ ಧೈರ್ಯಶಾಲಿಗಳು ಮಗುವಿನ ಮನಸಿನ ಹಾಸ್ಯ ಪ್ರಜ್ಞೆಯ ವ್ಯಕ್ತಿಯಾಗಿದ್ದರು.ಯುವ ಒಕ್ಕೂಟದ ಉಪಾಧ್ಯಕ್ಷರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದವರು ಹಾಗೂ ಹಾಲಕ್ಕಿ ಸಮಾಜ ಸಂಘಟೆಯಲ್ಲಿ ಮುಂಚೂಣಿಯಲ್ಲಿ ಇದ್ದು ಕುಮಟಾದ ಹಾಲಕ್ಕಿ ಸಮಾಜ ಮಂದಿರ ನಿರ್ಮಾಣದ ಸಂದರ್ಭದಲ್ಲಿ ನೀಡಿದ ಸಹಕಾರವನ್ನು ನೆನದರು.ಪಂಚಾಯತದ ಅಧ್ಯಕ್ಷರಾಗಿ ಸದಸ್ಯರಾಗಿ ಹಾಗೂ ದೇವಸ್ಥಾನದ ಕಮಿಟಿಗಳ ಸದಸ್ಯರಾಗಿ ಅವರು ನೀಡಿದ ಸೇವೆಯನ್ನು ಸ್ಮರಿಸಲಾಯಿತು. ಚಿದಾನಂದ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.

RELATED ARTICLES  How Many Bitcoin Can I Buy For $100? Heres How Much

ಈ ಕಾರ್ಯದಲ್ಲಿ ಹಾಲಕ್ಕಿ ಸಮಾಜದ ಪ್ರಮುಖರುಗಳು ವಾಲಗಳ್ಳಿ ಪಂಚಾಯತದ ಸಿಬ್ಬಂದಿಗಳು ಹಾಗೂ ದಿವಂಗತ ಮಂಜುನಾಥ ಗೌಡರ ಗೆಳೆಯರನೇಕರು ಪಾಲ್ಗೊಂಡಿದ್ದರು.