ಕುಮಟಾ: ತಾಲೂಕಿನ ಧಾರೇಶ್ವರ ಹಾಗೂ ಬೆತ್ತಗೇರಿ ನಡುವಿನಲ್ಲಿ ಹತ್ತಿರ ವೇಗದಿಂದ ಬಂದ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ರಕ್ಷಕಕ್ಕೆ ಡಿಕ್ಕಿ ಹೊಡೆದು ರಸ್ತೆಯ ಮೇಲೆ ಪಲ್ಟಿ ಆಗಿರುವ ಘಟನೆ ನಡೆದಿದೆ
ಹುಡುಗಿಯನ್ನು ಕರೆದುಕೊಂಡು ಹೋಗಿ ಹುಬ್ಬಳ್ಳಿಗೆ ಬಿಟ್ಟು ಹುಬ್ಬಳ್ಳಿಯಿಂದ ಉಡುಪಿಗೆ ವಾಪಸ್ ಹೋಗುವ ಸಂಧರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಯ ಪಕ್ಕದಲ್ಲಿರುವ ರಕ್ಷಕಕ್ಕೆ ಗುದ್ದಿ ಪಲ್ಟಿ ಹೊಡೆದಿದೆ.
ಘಟನೆಯಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಂಬುಲೆನ್ಸ್ ನಲ್ಲಿ ಇದ್ದ ಸವಾರರನ್ನು ಹಿಂಬದಿಯ ಬಾಗಿಲು ತೆರೆದು ರಕ್ಷಣೆ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದರಿಂದ ಕೆಲಕಾಲ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತತೆ ಉಂಟಾಯಿತು. ಕುಮಟಾ ಪೋಲೀಸರು ಸ್ಥಳಕ್ಕೆ ದಾವಿಸಿದ್ದು , ರಸ್ತೆ ಸಂಚಾರಕ್ಕೆ ಅನುಕೂಲಮಾಡಿಕೊಟ್ಟಿದ್ದಾರೆ.