ಗೋಕರ್ಣ: ದೇವರ ಅಮೃತ ಕಲಶ ಬಂದು ಹೋಗುವ ಸ್ಥಳದಲ್ಲಿ ಲಸಿಕೆ ನೀಡುವ ಕಾರ್ಯ ನಡೆಯುತ್ತಿದ್ದು, ಮಹಾಮಾರಿ ಕೊರೊನಾ ಶ್ರೀದೇವರ ಕೃಪೆಯಿಂದ ದೂರವಾಗಲಿ ಎಂದು ಸಿದ್ದಿವಿನಾಯಕ ಮಹಾಲಸ ಟ್ರಸ್ಟ ಧರ್ಮದರ್ಶಿ ಸುನಿಲ ಪೈ ಹೇಳಿದರು. ಅವರು ಸೋಮವಾರ ಮಾದನಗೇರಿಯ ಮಹಾಲಸಾ ಸಿದ್ದಿವಿನಾಯಕ ಸಭಾಭವನದಲ್ಲಿ ಕೋವಿಡ್ ಲಸಿಕಾ ಮಹಾಮೇಳ ಉದ್ಘಾಟಿಸಿ ಮಾತನಾಡಿದರು. ನಮ್ಮ ಕಾಳಜಿ ಜೊತೆ ಸಮಾಜದ ಒಳಿತನ್ನು ಅರಿತು ಇಂದಿನ ವಿಷಮ ಪರಿಸ್ಥಿತಿಯನ್ನು ಎದುರಿಸೋಣ , ನಮಗಾಗಿ ಅವಿರತ ಶ್ರಮಿಸುತ್ತಿರುವ ಕೋವಿಡ ವಾರಿರ್ಯಸ್ ಕಾರ್ಯ ಶ್ಲಾಘನೀಯವಾಗಿದೆ ಎಂದರು. ನಮ್ಮ ಭಾಗದ ಅಭಿವೃದ್ದಿ ಕಾರ್ಯಗಳಿಗೆ ನಿರಂತರ ಶ್ರಮಿಸುತ್ತಿರುವ ತೊರ್ಕೆ ಪಂಚಾಯತ ಅಧ್ಯಕ್ಷರಿಗೆ ತಮ್ಮ ಸಹಾಯ ನಿರಂತರವಾಗಿದೆ ಎಂದು ತಿಳಿಸಿದರು.
ತೊರ್ಕೆ ಗ್ರಾಮ ಪಂಚಾಯತ ಅಧ್ಯಕ್ಷ ಆನಂದು ಕವರಿ ಮಾತನಾಡಿ ,ಧರ್ಮದರ್ಶಿಗಳು ದೇವಾಲಯದ ಸಭಾಭವನವನ್ನು ಲಸಿಕಾ ಕಾರ್ಯಕ್ರಮಕ್ಕೆ ನೀಡುವದರ ಜೊತೆ ಇಂದು ವಾರಿರ್ಯಸ್‌ಗೆ ಧನ ಸಹಾಯವನ್ನು ನೀಡಿದ್ದು , ಪ್ರಶಂಸನೀಯ ಎಂದರು. ಧಾರ್ಮಿಕ ಕೈಂಕರ್ಯದ ಜೊತೆ ಸಾಮಾಜಿಕ ಕಾರ್ಯಗಳಿಗೂ ಕೈಜೋಡಿಸುತ್ತಾ ಬಂದಿರುವ ಸುನಿಲ್ ಪೈರವರಿಗೆ ಅಭಿನಂದಿಸುತ್ತೇನೆ ಎಂದರು. ನಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾರಿಗೆ ಏನೇ ತೊಂದರೆ ಬಂದರು ನಮ್ಮನ್ನು ಸಂಪರ್ಕಿಸಿ ಜನರ ಸೇವೆಗೆ ಸದಾ ಸಿದ್ದವಿದ್ದೇವೆ ಎಂದರು. ಅಲ್ಲದೇ ಈ ಗ್ರಾಮಾಂತರ ಭಾಗದಲ್ಲಿ ಕೊರೊನಾ ಲಸಿಕೆ ಪೂರೈಕೆ ಮಾಡುವಲ್ಲಿ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮತ್ತು ತಾಲೂಕಾ ವೈದ್ಯಾಧಿಕಾರಿ ಡಾ. ಆಜ್ಞಾ ನಾಯಕ ಸಹಾಯ ಸಹಾಕರವನ್ನು ವಿವರಿಸಿ ಕೃತಜ್ಞತೆ ಸಲ್ಲಿಸಿದರು. ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಲಭ್ಯವಿದ್ದು ಎಲ್ಲರೂ ಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ವೇಳೆ ತೊರ್ಕೆ ಗ್ರಾಂ . ಪಂ. ಉಪಾಧ್ಯಕ್ಷೆ ಲಕ್ಷ್ಮಿ ಗೌಡ , ಗ್ರಾಂ ಪಂ. ಸದಸ್ಯ ಮಹೇಶ ನಾಯಕ , ಸಂದೀಪ ಅಗಸಾಲಿ,ಮಹಾಬಲೇಶ್ವರ ಕೋ ಆಫ್ ಬ್ಯಾಂಕ್ ಉಪಾಧ್ಯಕ್ಷ ರಾಮು ಕೆಂಚನ್ , ಮಾಜಿ ತಾಂ. ಪಂ. ಸದಸ್ಯ ವೆಂಕಟ್ರಮಣ ಕವರಿ , ಉದ್ಯಮಿ ಜಯಶಂಕರ ಶೆಟ್ಟಿ , ಗ್ರಾಮ ಪಂಚಾಯತ ಪಿ.ಡಿ.ಓ. ಮಮತಾಜ್ , ಕಾರ್ಯದರ್ಶಿ ವಿನಾಯಕ ,ಹಿರಿಯ ಆರೋಗ್ಯ ಅಧಿಕಾರಿ ಯುಸೂಪ್, ಆಶಾ , ಅಂಗನವಾಡಿ ಕಾರ್ಯಕರ್ತೆಯರು , ಆರೋಗ್ಯ ಇಲಾಖೆ ಸಿಬ್ಬಂದಿ ,ಗ್ರಾಂ. ಪಂ. ಸದಸ್ಯರು ಉಪಸ್ಥಿತರಿದ್ದರು.
ವಾರಿರ್ಯಸ್ ಗೆ ಧನಸಹಾಯ : ಕೋವಿಡ್ ಎಲ್ಲಾ ವಾರಿರ್ಯಸ ಗೆ ಧರ್ಮದರ್ಶಿ ಸುನಿಲ್ ಪೈ ಧನಸಾಹವನ್ನು ನೀಡಿ ಗೌರವಿಸಿದರು.
ಅಚ್ಚುಕಟ್ಟಿನ ವ್ಯವಸ್ಥೆ ಎಷ್ಟೇ ಜನ ಬಂದರು ನೂಕು ನೂಗ್ಗಲಿಗೆ ಅವಕಾಶವಿಲ್ಲ: ಸಭಾಭವನದಲ್ಲಿ ಲಸಿಕೆ ಪಡೆಯಲು ಬರುವ ಪ್ರತಿಯೊಬ್ಬರಿಗೂ ಖುರ್ಚಿ ಹಾಕಿ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು, ವಿಶಾಲ ಜಾಗವಿರುವ ಕಡೆ ಈ ವ್ಯವಸ್ಥೆಯನ್ನು ತೊರ್ಕೆ ಪಂಚಾಯತ ಅಧ್ಯಕ್ಷರ ಮೂಲಕ ನಡೆದಿದ್ದು, ಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅಚ್ಚುಕಟ್ಟಿನ ವ್ಯವಸ್ಥೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
“ನನ್ನ ಗ್ರಾಮ ಪಂಚಾಯತ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಸಿಗಬೇಕು ಎಂಬುದು ನನ್ನ ಆಶಯವಾಗಿದ್ದು, ಅದರಂತೆ ನಮ್ಮ ಕಾರ್ಯ ಮುಂದುವರಿದ್ದು, ಸರ್ವರಿಗೂ ಲಸಿಕೆ ನೀಡುವ ಮೂಲಕ ಲಸಿಕಾ ಅಭಿಯಾನ ಯಶಸ್ವಿಗೊಳಿಸುತ್ತೇವೆ.
– ಆನಂದು ಕವರಿ ಅಧ್ಯಕ್ಷರು ತೊರ್ಕೆ ಗ್ರಾಮ ಪಂಚಾಯತ