ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಪ್ರೇರಣೆ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತವಾಗಿರುವ ಹವ್ಯಕ ಮಹಾ ಮಂಡಲಾಂತರ್ಗತ ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನಿಯ ಆಶ್ರಯದಲ್ಲಿ ಅಂತರ್ಜಾಲ ವೆಬಿನಾರ್ ಮೂಲಕ ವಿಶ್ವ ಯೋಗ ದಿನಾಚರಣೆ ನಡೆಯಿತು.

ಮುಳ್ಳೇರಿಯ ಮಂಡಲ ಅಧ್ಯಕ್ಷರಾದ ಶ್ರೀ ಬಾಲಸುಬ್ರಹ್ಮಣ್ಯ ಸರ್ಪಮಲೆ ಅಧ್ಯಕ್ಷತೆ ವಹಿಸಿದರು. ಮಹಾಮಂಡಲ ವಿದ್ಯಾರ್ಥಿ ವಾಹಿನೀ ಪ್ರಧಾನೆ ಶ್ರೀಮತಿ ಸಂಧ್ಯಾ ಕಾನತ್ತೂರು ಶುಭ ಹಾರೈಸಿದರು. ನಿವೃತ್ತ ಪ್ರಾಂಶುಪಾಲರೂ ರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಶ್ರೀ ವಿಶ್ವೇಶ್ವರ ಭಟ್ಟ ಉಂಡೆಮನೆ ಅವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ಮತ್ತು ಸಂವಾದವನ್ನು ನಡೆಸಿಕೊಟ್ಟರು.

RELATED ARTICLES  ಧರ್ಮಸ್ಥಳ ಮಹಾಮಸ್ತಕಾಭಿಷೇಕ: ಪಂಚಮಹಾವೈಭವ ವೇದಿಕೆ ಚಪ್ಪರ ಕುಸಿದು ಅವಘಡ

ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದ ವಿದ್ಯಾರ್ಥಿನಿಯರಾದ ಧರಣಿ ಸರಳಿ ಮತ್ತು ದಶಮಿ ಸರಳಿ ಪ್ರಾರ್ಥನೆ ಹಾಡಿದರು. ಮುಳ್ಳೇರಿಯ ಮಂಡಲ ಸಂಘಟನಾ ಕಾರ್ಯದರ್ಶಿ ಶ್ರೀ ಕೇಶವಪ್ರಸಾದ ಎಡಕ್ಕಾನ ಸ್ವಾಗತಿಸಿ ಶ್ರೀ ಗುರುಮೂರ್ತಿ ಮೇಣ ವಂದಿಸಿದರು. ಕು. ಪ್ರಗತಿ ಕೋಡ್ಮಾಡು ಕಾರ್ಯಕ್ರಮ ನಿರೂಪಣೆಗೈದರು.
————————–?

RELATED ARTICLES  ರಾಜ್ಯದ ಕರಾವಳಿಗೂ ಅಪ್ಪಳಿಸಲಿದೆ ಚಂಡಮಾರುತ: ದಿಕ್ಕು ಬದಲಿಸಿ ಹೊರಟಿದೆ 'ಗಜ'