ಕುಮಟಾ: ಲಾಕ್ ಡೌನ್ ನಿಂದ ಮಧ್ಯಮ ವರ್ಗದ ಜನರೂ ಕೂಡ ತತ್ತರಿಸಿಹೋಗಿದ್ದು, ವಿವಿಧ ಉದ್ಯಮಗಳು ಮಕಾಡೆ ಮಲಗಿದ್ದು, ಇದರ ನಡುವೆಯೇ ಬಡವರ್ಗದ ಜನರ ಪಾಡೇನು ಎಂಬ ಪ್ರಶ್ನೆಯೂ ಇದೆ. ಹಾಗಾಗಿಯೇ ತಿಂಗಳಿಗೆ ಸಾಲುವಷ್ಟು ದಿನಸಿ ಕಿಟ್ ಗಳನ್ನು ಕ್ಷೇತ್ರದ ಎಲ್ಲಾ ಭಾಗಗಳಿಗೆ ತೆರಳಿ ವಿತರಿಸುತ್ತಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಅವರು ಪಟ್ಟಣದ 13ನೇ ವಾರ್ಡ್ ಗೆ ಒಳಪಡುವ ಗುಂದ ಭಾಗದ ಜನರಿಗೆ ಹಾಗೂ ರಿಕ್ಷಾ ಚಾಲಕರಿಗೆ ಬಿಜೆಪಿ ಪರಿಶಿಷ್ಟ ಜಾತಿ ಯುವ ಮೋರ್ಚಾ ವತಿಯಿಂದ ನೀಡಲಾಗುವ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.

RELATED ARTICLES  ಹಾಲು ತುಂಬಿ ಸಾಗುತ್ತಿದ್ದ ಟ್ಯಾಂಕರ್ ಲಾರಿ ಪಲ್ಟಿ

ಬಡವರ ಹಸಿವಿನ ವೇದನೆ ನನಗೆ ಅರಿವಿದ್ದು ಹಿಂದಿನ ವರ್ಷದ ಲಾಕ್ ಡೌನ್ ಅವಧಿಯಲ್ಲೂ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ನೆರವಾಗಿದ್ದೆ. ಈ ಬಾರಿ ಕುಮಟಾ ಮತ್ತು ಹೊನ್ನಾವರ ಸೇರಿದಂತೆ 5000ಕ್ಕೂ ಹೆಚ್ಚು ಕಿಟ್ ಗಳನ್ನು ನೀಡಲಾಗಿದೆ. ಈ ಭಾಗದಲ್ಲಿ 100 ಮಂದಿಗೆ ವಿತರಣೆ ಮಾಡಲಾಗುತ್ತಿದ್ದು ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಉತ್ತಮ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.

RELATED ARTICLES  ಚಾಲಕನ ನಿಯಂತ್ರಣತಪ್ಪಿ ಲಾರಿ ಪಲ್ಟಿ

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ಸದಸ್ಯ ಅಭಿ ಚಂದ್ರಹಾಸ ನಾಯ್ಕ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಾ ಶೇಟ್, ಪರಿಶಿಷ್ಟ ಜಾತಿ ಯುವ ಮೋರ್ಚಾ ನಗರಾಧ್ಯಕ್ಷ ಪ್ರಸಾದ ನಾಯಕ, ಬಿಜೆಪಿ ಹಿರಿಯ ಮುಖಂಡ ಅಪ್ಪುರಾಯ ಪಿಕಳೆ ಮುಂತಾದವರು ಇದ್ದರು.