ಶಿರಸಿ : ನಗರದ ಸಾಮ್ರಾಟ್ ಹೋಟೆಲ್ ಎದುರಿನ ನೀಲಕಂಠ ನಾರಾಯಣ ಮುರುಡೇಶ್ವರ ಎನ್ನುವವರ ಮನೆಯಲ್ಲಿ ಇರಿಸಿದ್ದ 8 ಕೆಜಿ ತೂಕದ ಸುಮಾರು 4000 ರೂ ಮೌಲ್ಯದ ತಾಮ್ರದ ಹಂಡೆಯನ್ನು ಕದ್ದ ಇಬ್ಬರು ಆರೋಪಿಗಳನ್ನು ಶಿರಸಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಗಣೇಶ ನಗರದ ಸಲೀಂ ಸಾಬ್ಜಾನಸಾಬ್ ಶಿವಮೊಗ್ಗ (31) ಮತ್ತು ದೇವಿದಾಸ ಪಾಪಾ ಗೋಸಾವಿ(25) ಬಂಧಿತ ಆರೋಪಿಗಳು.ಆರೋಪಿಗಳಿಂದ ಕಳ್ಳತನ ಮಾಡಿದ ಮಾಡಿದ ಹಂಡೆ ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಶಿರಸಿ ಸಿ.ಪಿ.ಐ ರಾಮಚಂದ್ರ ನಾಯಕ,ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ಭೀಮಾಶಂಕರ ಅಪರಾಧ ವಿಭಾಗ ಪಿ.ಎಸ್.ಐ ಜಯಶ್ರೀ ಸಿಬ್ಬಂದಿ ಗಳಾದ ಮೊಹಮ್ಮದ್ ಇಸ್ಮಾಯಿಲ್ ಕೋಣನಕೇರಿ,ರಾಮಯ್ಯ ಪೂಜಾರಿ,ಹನುಮಂತ ಬಂಕಾಪುರ,ಮೋಹನ ನಾಯ್ಕ ಮತ್ತು ಪಾಂಡುರಂಗ ನಾಗೋಜಿ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.