ಭಟ್ಕಳ: ಅಕ್ರಮವಾಗಿ ನಡೆಯುವ ಗೋವುಗಳ ಕಳ್ಳ ಸಾಗಾಣಿಕೆ ಯನ್ನು ಪೊಲೀಸ್ ಇಲಾಖೆಯ ಬೇಧಿಸುತ್ತಿದ್ದರೆ, ಇನ್ನೊಂದೆಡೆ ಗೋಮಾಂಸ ಸಾಗಾಟ ಜಾಲ ಪತ್ತೆಯಾಗುತ್ತದೆ.

ಆಟೋವೊಂದರಲ್ಲಿ ಅಕ್ರಮವಾಗಿ 70 ಕೆಜಿ ಗೋಮಾಂಸ ಸಾಗಿಸುತ್ತಿರುವಾಗ ಪೊಲೀಸರು 70 ಕೆಜಿ ಗೋಮಾಂಸ ಸಹಿತ ಆರೋಪಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ.

ಗೋ ಮಾಂಸ ಸಾಗಾಟ ಮಾಡುತ್ತಿದ್ದ ಕೃತ್ಯದಲ್ಲಿ ಇಬ್ರಾಹಿಂ ಖಲೀಲ್ ಆರೋಪಿಯಾಗಿದ್ದು, ಗೋಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಜಾನುವಾರನ್ನು ವದೆ ಮಾಡಿ ಸುಮಾರು 14 ಸಾವಿರ ಮೌಲ್ಯದ 70 ಕೆಜಿ ಆಗುವಷ್ಟು ಗೋಮಾಂಸವನ್ನು ತನ್ನ ಆಟೋದಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

RELATED ARTICLES  ಬಾರ್ ನಲ್ಲಿ ಕಳ್ಳತನ : ನಗದು ಹಾಗೂ ಮಧ್ಯದ ಬಾಟಲಿ ಎಗರಿಸಿದ ಕಳ್ಳರು.

ತಾಲೂಕಿನ ಡೊಂಗರಪಳ್ಳಿ ಸಮೀಪ ಆಟೋ ಸಮೇತ ಆರೋಪಿಯನ್ನು ಬಂಧಿಸಲಾಗಿದೆ. ಈ ಕುರಿತು ಭಟ್ಕಳ ನಗರ ಠಾಣೆ ಪಿಎಸ್‍ಐ ಎಚ್.ಬಿ ಕುಡಗುಂಡಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES  ಮಳೆಯ ಅಬ್ಬರ ಉಕ್ಕಿ ಹರಿದ ನದಿಗಳು : ಕೃಷಿ ಚಟುವಟಿಕೆಗೆ ಚಾಲನೆ

ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಹಾಗೂ ಗೋವುಗಳ ಕಳ್ಳ ಸಾಗಣೆ ಮತ್ತು ಗೋಮಾಂಸ ಸಾಗಾಟ ಮಾಡುವವರ ಜಾಲವನ್ನು ಭೇದಿಸಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿದೆ.