ಶಿರಸಿ: ಭಾರತದ ಭವಿಷ್ಯ ಹಳ್ಳಿಗಳಲ್ಲಿ ಇದೆ. ಹಳ್ಳಿಗಳನ್ನು ಅರಸಿ ಮತ್ತೆ ವಿದ್ಯಾವಂತರು, ಕೃಷಿ ಆಸಕ್ತರು ಬಂದೇ ಬರುತ್ತಾರೆ. ಹಳ್ಳಿಗಳ ಭಾರತವೇ ಜಗತ್ತನ್ನು ಉಳಿಸಬಲ್ಲದು ಎಂದು ಭಾರತ ಪರಿಕ್ರಮ ಯಾತ್ರೆಯ ನೇತಾರ ಸೀತಾರಾಮ ಕೇದಿಲಾಯ ಪ್ರತಿಪಾದಿಸಿದರು.
ಅವರು ನಗರದ ಅಜಿತಮನೋಚೇತನಾಲಯದಲ್ಲಿ ಹಮ್ಮಿಕೊಂಡ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಭಾರತ ಪರಿಕ್ರಮ ಯಾತ್ರೆಯಲ್ಲಿ ಭಾರತಕ್ಕೆ ಭವಿಷ್ಯವಿದೆ ಹಾಗೂ ಭಾರತಕ್ಕೇ ಭವಿಷ್ಯ ಇದೆ ಎಂಬುದು ಅರ್ಥವಾಗಿದೆ. ಯಾವತ್ತೂ ಭಾರತಕ್ಕೇ ಅಳಿವಿಲ್ಲ. ಶಾಸ್ತ್ರದಲ್ಲಿ ಇರುವದು ಭಾರತದ ಹಳ್ಳಿಗಳಲ್ಲಿದೆ. ಭಾರತದ ಬದುಕು ಕಣ್ಣಿಗೆ ಕಾಣುವ ವೈಭವದ ಮುಂದೆ ಇಲ್ಲ. ಕಣ್ಣಿಗೆ ಕಾಣದ ಆಧ್ಯಾತ್ಮದ ಮೇಲಿದೆ ಎಂದ ಕೇದಿಲಾಯ, ಜಗತ್ತಿನ ಉಳಿದಡೆ ದೇಹ ಹಿಡಿದು ನಡೆದರೆ ಭಾರತವು ಆತ್ಮ ಹಿಡಿದು ನಡೆಯುತ್ತದೆ. ಆಧ್ಯಾತ್ಮ ಎಂದರೆ ಬದುಕಿನ ಕಲೆ. ಅದು ಭಾರತದ ಹಳ್ಳಿಗಳಲ್ಲಿ ನೋಡಬಹುದು ಎಂದರು.
ಹರಟೆ ಹೇಳಿದ್ರು, ಬನ್ನಿ ಅಂದರು. ಆದರೆ ಶಾಲು ಸಮ್ಮಾನ ಆಗಿದ್ರೆ ಬರ್ತಿರಲಿಲ್ಲ. ಸನ್ಮಾನ ಪಡೆಯಲು ನಾನೇನು ಮಾಡಿಲ್ಲ ಎಂದ ಅವರು, ಆಯಾ ರಾಜ್ಯದ ಮುಖ್ಯಮಂತ್ರಿಗಳಿಗೆ, ದೇಶದ ಕುರಿತು ಪ್ರಧಾನಿಗಳಿಗೆ ಧನಾತ್ಮಕ ಹಾಅಗೂ ಸಮಸ್ಯೆ ವಿಷಯಗಳ ಕುರಿತು ತಿಳಿಸಲಾಗಿದೆ. ಐದು ವರ್ಷದ ಪಥದಲ್ಲಿ ಕಂಡಿದ್ದು ಅನೇಕ ಎಂದು ವಿವರಿಸಿದರು. ಬಳಿಕ ಸಂವಾದ ಕೂಡ ನಡೆಯಿತು.
ಈ ವೇಳೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತ ಅಶೀಸರ, ದಿವಾಕರ ಹೆಗಡೆ ಕೆರೆಹೊಂಡ, ಸುಧೀರ ಭಟ್ಟ, ವಾಸಂತಿ ಹೆಗಡೆ, ವಿನಾಯಕ ಭಟ್ಟ, ಉದಯ ಸ್ವಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
RELATED ARTICLES  ಕಾರು ಹಾಗೂ ಬೈಕ್ ನಡುವೆ ಅಪಘಾತ