ಕುಮಟಾ: ಇಲ್ಲಿನ ಕೊಂಕಣ ಏಜ್ಯುಕೇಶನ್ ಟ್ರಸ್ಟಿನ್ ಸರಸ್ವತಿ ಪದವಿಪೂರ್ವ ವಿದ್ಯಾಲಯದಲ್ಲಿ “ಶಾಲೆಯೆಡೆಗೆ ಗೊಂಬೆಯ ನಡೆಗೆ” ಎಂಬ ವಿಶಿಸ್ಟವಾದ ಗೊಂಬೆಯಾಟ ಪ್ರದರ್ಶನ ವಿದ್ಯಾರ್ಥಿಗಳ ಮನಸೂರೆಗೊಂಡಿತು. ಉಪ್ಪಿನ ಕುದ್ರುವಿನ ಶ್ರೀ ಗಣೇಶ ಯಕ್ಷಗಾನ ಮಂಡಳಿಯ ಶ್ರೀ ಭಾಸ್ಕರ ಕಾಮತ ಹಾಗೂ ತಂಡದವರು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ 350 ವರ್ಷಗಳ ಪರಂಪರೆಯುಳ್ಳ ಈ ಯಕ್ಷಗಾನ ಮಂಡಳಿಯ ಶ್ರೀ ಭಾಸ್ಕರ ಕಾಮತ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಕಾಶಿನಾಥ ನಾಯಕ ರವರು ಶಾಲು ಹೊದಿಸಿ ಸನ್ಮಾನಿಸದರು .
ಈ ವೇಳೆಯಲ್ಲಿ ಸುಬ್ರಮಣ್ಯ ಕಾಲೇಜಿನ ನಿವ್ರತ್ತ ಪ್ರಾಚಾರ್ಯರಾದ ಶ್ರೀ ವಿ.ಜಿ. ಹೆಗಡೆ ಗುಡ್ಗೆ, ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಡಾ. ಸುಲೋಚನಾ ರಾವ್ , ಶ್ರೀ ಆರ್. ಎಚ್.ದೇಶಭಂಡಾರಿ, ಶ್ರೀಮತಿ ಲೀಲಾವತಿ ನಾಯಕ , ಶ್ರೀಮತಿ ಸುಮಾ ಪ್ರಭು ಮುಂತಾದವರು ಉಪಸ್ಧಿತರಿದ್ದರು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿಲಾಯಿತು. ನಂತರದಲ್ಲಿ ಗೊಂಬೆಯಾಟದ ವಿವಿಧ್ ರೀತಿ ಭಂಗಿಗಳನ್ನು ಪ್ರಾತ್ಯಕ್ಷಿಕೆಯಾ ಮೂಲಕ ತೋರಿಸಿಕೊಟ್ಟರು. ವಿದ್ಯಾರ್ಥಿಗಳ ಮನಸೂರೆಗೊಂಡ ಯಶಸ್ವಿ ಕಾರ್ಯಕ್ರಮವಾಗಿತ್ತು.
ಪ್ರಾಚಾರ್ಯರಾದ ಶ್ರೀಮತಿ ಡಾ. ಸುಲೋಚನಾ ರಾವ್ ಸ್ವಾಗತಿಸಿದರು. ಶ್ರೀ ಶಿವಾನಂದ ಭಟ್ಟ್ ಧನ್ಯವಾದ ಸಮರ್ಪಿಸಿದರು. ಸಾಯಿದೀಪ ನಿರೂಪಿಸಿದರು. ಸ್ವಾತಂತ್ರ್ಯ್ ಎ. ನ್ ಪ್ರಾರ್ಥಿಸಿದರು.