ಕುಮಟಾ : ಇಲ್ಲಿನ ಬಸ್ ಘಟಕದಿಂದ ಸಾರ್ವಜನಿಕರಿಗೆ ಸೇವೆ ನೀಡುವ ಅನೇಕ ಬಸ್ ಗಳ ಅವಧಿ ಮೀರಿ ಹೋಗಿದ್ದರು ಅದೇ ಬಸ್ ನಲ್ಲಿ ಬಡ ಜನರು ಪ್ರಯಾಣಿಸುವ ಸ್ಥಿತಿ ಬಂದೊದಗಿದೆ ಎಂದು ಬಿಜೆಪಿ ಕಾರ್ಯಕರ್ತರು ದೂರಿದರು .

ಸಾವಿರಾರು ಸಾರ್ವಜನಿಕರು ಈ ಅವಧಿ ಮೀರಿದ ಬಸ್ ನಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಕೂರುವ ಸ್ಥಿತಿ ಎದುರಾಗಿದೆ .ಇಂತಹ ಅವ್ಯವಸ್ಥೆಯನ್ನು ಖಂಡಿಸಿ ಬಿಜೆಪಿ ಕುಮಟಾ ಮಂಡಳದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಬಸ್ ನಿಲ್ದಾಣಕ್ಕೆ ಆಗಮಿಸಿ ಗುಜರಿ ಬಸ್ ಗಳನ್ನು ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು , ಅಷ್ಟೇ ಅಲ್ಲದೆ ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು . ಪ್ರತಿಭಟನಾಕಾರರು ಅಲ್ಲಿರುವ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು .

RELATED ARTICLES  ಕುಮಟಾ : ಬೆಂಕಿ ಅವಘಡ : ಬೆಳೆ ಬೆಂಕಿಗೆ ಆಹುತಿ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಾಗರಾಜ್ ನಾಯಕ ತೊರ್ಕೆ, ದಿನಕರ್ ಶೆಟ್ಟಿ ಸೂರಜ್ ನಾಯ್ಕ ಸೋನಿ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು .

RELATED ARTICLES  ಜಿ.ಸಿ ಕಾಲೇಜಿನಲ್ಲಿ ಬೃಹತ್ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವಿಶೇಷ ರೀತಿಯಲ್ಲಿ ಗ್ರಂಥಾಲಯ ದಿನ ಆಚರಣೆ