ಹೊನ್ನಾವರ:- ತಾಲೂಕಿನಾದ್ಯಂತ ತಿಂಗಳುಗಳ ಕಾಲ ಕೋರೊನಾ ರೋಗದಿಂದ ಜನ ಭಯಭೀತರಾಗಿ ತತ್ತರಿಸಿದಾಗ ಜನರ ಸಹಾಯಕ್ಕೆ ಧಾವಿಸಿದವರು ವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು. ಆಶಾ ಕಾರ್ಯಕರ್ತೆಯರು, ಜೀವದ ಹಂಗು ತೊರೆದು ಹೋರಾಡಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಶ್ರಮವನ್ನು ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ, ತುಂಬು ಹೃದಯದಿಂದ ಕೊಂಡಾಡಿ, ಕಷ್ಟಕಾಲದಲ್ಲಿ ನೆರವಿನಹಸ್ತ ಚಾಚಿದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಅಭಿನಂದಿಸಿದ್ದರು.
ಅವರು ಇಂದು ಹೊನ್ನಾವರದ ಬ್ಲಾಕ್ ಕಾಂಗ್ರೇಸ್, ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಆರ್. ವಿ. ದೇಶಪಾಂಡೆ ರವಾನಿಸಿದ ಮೆಡಿಕಲ್ ಕಿಟ್
ವಿತರಿಸಿ ಮಾತನಾಡುತ್ತಿದ್ದರು.
ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮಾಜಿ ಸಚಿವ ಆರ್. ವಿ. ದೇಶಪಾಂಡೆಯವರ ನೆರವಿನ ಹಸ್ತವನ್ನು ಕೃತಜ್ಞತೆಯಿಂದ ಸ್ಮರಿಸಿದರು. ತಾಲೂಕಿನ ೩೨೫ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ೧೭೩ ಆಶಾ ಕಾರ್ಯಕರ್ತರಿಗೆ ಇಂದು “ ಮೆಡಿಕಲ್ ಕಿಟ್ “ ದೇಶಪಾಂಡೆಯವರ ನೆರವಿನೊಂದಿಗೆ ಪಕ್ಷದ ಮುಖಂಡರು ವಿತರಿಸಿದ್ದಾರೆ. ಹಿಂದೆಯೂ ಸರಕಾರಿ ಆಸ್ಪತ್ರೆಗೆ ಮತ್ತು ತಾಲೂಕಾ ಆಡಳಿತಕ್ಕೆ ಪಿಪಿಇ ಕಿಟ್, ಒಕ್ಸಿಮೀಟರ್ ಇನ್ನೂ ಹಲವಾರು ವೈಧ್ಯಕೀಯ ಸಲಕರಣೆಗಳನ್ನು ನೀಡುವ ಮೂಲಕ ದೇಶಪಾಂಡೆಯವರ ನೆರವನ್ನು ಶ್ಲಾಘಿಸಿದರು.
ಜಿಲ್ಲಾ ಕಾಂಗ್ರೇಸದ ಕಿಸಾನ ವಿಭಾಗದ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಸರಕಾರವು ನೆರವಿಗೆ ಬಾರದ ಇಂತಹ ಕಷ್ಟದ ಕಾಲದಲ್ಲಿ ದೇಶಪಾಂಡೆಯವರ ನೆರವನ್ನು ಶ್ಲಾಘಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಉಷಾ ಹಾಸ್ಯಗಾರ, ತಾಲೂಕಾ ಆಸ್ಪತ್ರೆ ವೈದ್ಯಾಧಿಕಾರಿ ರಾಜೇಶ ಕಿಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ರೀಮತಿ ಜಯಶ್ರೀ ನಾಯ್ಕ, ಪ್ರಚಾರ ಸಮಿತಿಯ ಅಧ್ಯಕ್ಷ ಎಮ್. ಎನ್. ಸುಬ್ರಮ್ಮಣ್ಯ, ಕೆ.ಪಿ.ಸಿ.ಸಿ. ಸದಸ್ಯ ವಿನೋದ ನಾಯ್ಕ, ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ರವಿ ಶೆಟ್ಟಿ, ಕವಲಕ್ಕಿ, ಬಿ.ಸಿ.ಸಿ. ಕಾರ್ಯದರ್ಶಿ ದಾಮೋದರ ನಾಯ್ಕ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯಾ ಶೇಖ್, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ, ಹಿಂ.ವರ್ಗ ವಿಭಾಗದ ಆದ್ಯಕ್ಷ ಕೆ.ಎಚ್.ಗೌಡ, ಗಜು ನಾಯ್ಕ, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಯುವ ಕಾಂಗ್ರೇಸ್ ಅಧ್ಯಕ್ಷ ಸಂದೇಶ ಶೆಟ್ಟಿ, ಕಿಸಾನ ವಿಭಾಗದ ದ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ, ಕಾಂಗ್ರೇಸ್ ಮುಖಂಡರಾದ ಬಾಲಚಂದ್ರ ನಾಯ್ಕ, ಮಂಜು ಖಾರ್ವಿ, ಮಹೇಶ ನಾಯ್ಕ, ಶೇಖರ ಚಾರೋಡಿ, ಮಾದೇವ ನಾಯ್ಕ, ಕರ್ಕಿ. ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.