ಗೋಕರ್ಣ : ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಜ್ಞಾನ-ವಿಜ್ಞಾನ ಚಿಂತನ ಸತ್ರದಲ್ಲಿ ಈ ತಿಂಗಳ 27ರಂದು ಬೆಳಿಗ್ಗೆ 11.30ಕ್ಕೆ ಇಸ್ರೋ ವಿಜ್ಞಾನಿ ಶ್ರೀದೇವಿ ಭಟ್ ಜತೆ ಆನ್‍ಲೈನ್ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಿರುವನಂತಪುರದಲ್ಲಿರುವ ಇಸ್ರೋ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‍ನಲ್ಲಿ ವಿಜ್ಞಾನಿಯಾಗಿರುವ ಶ್ರೀದೇವಿ ಭಟ್ “ನಭಸ್ಪರ್ಶಮ್” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸುವರು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು ಎಂದು ವಿವಿವಿ ವಿದ್ಯಾ ಪರಿಷತ್ ಉಪಾಧ್ಯಕ್ಷ ಮರುವಳ ನಾರಾಯಣ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಗಳ ಬಗ್ಗೆ ಮತ್ತು ಈ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಮತ್ತು ಅಗತ್ಯ ಸಿದ್ಧತೆಗಳ ಬಗ್ಗೆ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವರು. ವಿವಿವಿ ಆಡಳಿತಾಧಿಕಾರಿ ಸುರೇಂದ್ರ ಹೆಗಡೆ, ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಕಾರ್ಯದರ್ಶಿ ನೀಲಕಂಠ ಯಾಜಿ ಮತ್ತಿತರರು ಭಾಗವಹಿಸುವರು. ಸಾರ್ವಜನಿಕರು ಝೂಮ್ ಮೀಟಿಂಗ್‍ನಲ್ಲಿ ಪಾಲ್ಗೊಳ್ಳಬಹುದಾಗಿದ್ದು .
ಲಿಂಕ್:pwd=ZEV2UEFKaXNjaC9uT1lgWjJYamh6Zzo9 ಮೀಟಿಂಗ್ ಐಡಿ: 99291413156; ಪಾಸ್‍ಕೋಡ್: 597323