ಭಟ್ಕಳ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವಳ ಮೊಬೈಲ್ ಹಾಗೂ ಎಟಿಎಂ ಕಾರ್ಡ್ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ರೈಲ್ವೇ ಪೋಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ನಂದನ್ ಕೆ(20) ಶ್ರೇಯಸ್ ಆರ್(21) ಬಂಧಿತ ಆರೋಪಿಗಳು. ಮಹಿಳೆ ಬೆಂಗಳೂರಿನಿಂದ ಅಂಕೋಲಾಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಂಕಿ ರೈಲ್ವೇ ನಿಲ್ದಾಣದಲ್ಲಿ ಮೊಬೈಲ್ ಕಳ್ಳತನವಾಗಿರುವ ಕುರಿತು ರೈಲ್ವೇ ಪೆÇೀಲೀಸರಿಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯನಿರತರಾದ ಭಟ್ಕಳ ಎಸೈ ಶಿಶುಪಾಲ್ ಸಿಂಗ್ ಸಿಸಿಟಿವಿ ಪರೀಶೀಲಿಸಿದಾಗ ಇಬ್ಬರು ಶಂಕಿತರು ಪತ್ತೆಯಾಗಿದ್ದರು.

RELATED ARTICLES  ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಸಕಲ ಸಿದ್ದತೆ ಮಾಡಿಕೊಂಡಿದೆ ಶಿಕ್ಷಣ ಇಲಾಖೆ .


ಮುರುಡೇಶ್ವರ ತೀರದ ಬಳಿ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಹಿಳೆಯ ಮೊಬೈಲ್ ಹಾಗೂ ಎಟಿಎಂ ಕಾರ್ಡ್ ದೊರಕಿದ್ದು ಇಬ್ಬರು ಆರೋಪಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

RELATED ARTICLES  ಲೋಕಾಯುಕ್ತ, ಎಸಿಬಿಯಲ್ಲಿ ಬಿಜೆಪಿಯಿಂದ ದೂರು ದಾಖಲು : ಜಾರ್ಜ್ ಗೆ ,ಮಾಜಿ ಸಿಎಂ ಸಿದ್ದು.. ಬಿಗ್ ಶಾಕ್!