ಹೊನ್ನಾವರ; ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಘಟಕ ಕಳೆದ ಮೂರು ತಿಂಗಳನಿಂದ ನಿರ್ವಹಣೆ ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡ ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ವೈಯಕ್ತಿಕವಾಗಿ ೫೦ ಸಾವಿರ ಮೊತ್ತದ ಚೆಕ್ ಶುಕ್ರವಾರ ಹಸ್ತಾಂತರಿಸುವ ಮೂಲಕ ನೆರವಾಗಿದ್ದಾರೆ. ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಚೆಕ್ ಸ್ವೀಕರಿಸಿದರು.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಐದು ಕರೋನಾ ಫಾಸಿಟಿವ್ : ನಿದ್ದೆಗೆಡಿಸಿದೆ ಶಿರಸಿ ಪ್ರಕರಣ


ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಕಳೆದ ಮೂರು ತಿಂಗಳಿನಿಂದ ಡಯಾಲಿಸಿಸ್ ನಿರ್ವಹಣೆ ಸಮಸ್ಯೆ ಬಗ್ಗೆ ಕೆಲ ದಿನದ ಹಿಂದೆ ನನ್ನ ಗಮನಕ್ಕೆ ಬಂದಾಗ ತಗಲುವ ವೆಚ್ಚದ ಬಗ್ಗೆ ಮಾಹಿತಿ ನೀಡಿದ್ದರು. ಮೆಡಿಸಿನ್ ಹಾಗೂ ಇತರೆ ಖರ್ಚುಗಳ ತಿಂಗಳಿಗೆ ಒಂದು ಲಕ್ಷಕ್ಕೂ ಅಧಿಕ ಮೊತ್ತ ಖರ್ಚಾಗುತ್ತಿತ್ತು. ವೈಯಕ್ತಿಕವಾಗಿ ೫೦ ಸಾವಿರ ಮೊತ್ತದ ಚೆಕ್ ಹಸ್ತಾಂತರಿಸಿದ್ದೇನೆ ಎಂದರು.

RELATED ARTICLES  ಉಪನ್ಯಾಸಕರಿಲ್ಲದೇ ಪಾಠ ನಡೆದಿಲ್ಲ, ಪರೀಕ್ಷೆ ಮುಂದೂಡಿ ಅಂತಿದ್ದಾರೆ ವಿದ್ಯಾರ್ಥಿಗಳು!


ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಜಗದೀಪ ತೆಂಗೇರಿ, ಪಕ್ಷದ ಮುಖಂಡರಾದ ಎಂ.ಎನ್‌. ಸುಬ್ರಹ್ಮಣ್ಯ, ರವಿ ಶೆಟ್ಟಿ ಕವಲಕ್ಕಿ, ವಿನೋದ‌ ನಾಯ್ಕ ಕರ್ಕಿ, ಜಗದೀಶ ಭಾವೆ ಹರಿಶ್ಚಂದ್ರ ನಾಯ್ಕ ಗ್ರಾಮ ಪಂಚಾಯತ ಸದಸ್ಯರಾದ ರಾಮಚಂದ್ರ ನಾಯ್ಕ, ಗಿರೀಶ ಗೌಡಾ ನವೀನ ನಾಯ್ಕ ಶ್ರೀನಾಥ ಶೆಟ್ಟಿ, ವಿನಾಯಕ ನಾಯ್ಕ, ಕಿರಣ ಭಂಡಾರಿ ಉಪಸ್ಥಿತರಿದ್ದರು.