ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ಇಂದು 94 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇಂದು ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಕಳೆದ ಅನೇಕ ದಿನದ ನಂತರ ಇಂದು ಯಾವುದೇ ಸಾವಿನ ಸಂಖ್ಯೆ ಬಗ್ಗೆ ವರದಿಯಾಗಿಲ್ಲ. ಅನೇಕ ದಿನಗಳ ನಂತರದಲ್ಲಿ ಯಾವುದೇ ಸಾವು ಸಂಭವಿಸದ ಬಗ್ಗೆ ವರದಿಯಾಗಿರುವುದು ಜನರಿಗೆ ಸಂತಸ ತಂದಿದೆ.

ಕಾರವಾರದಲ್ಲಿ 7, ಅಂಕೋಲಾದಲ್ಲಿ 3, ಕುಮಟಾದಲ್ಲಿ 27, ಹೊನ್ನಾವರ 14, ಭಟ್ಕಳದಲ್ಲಿ 6,  ಶಿರಸಿಯಲ್ಲಿ 11, ಸಿದ್ದಾಪುರದಲ್ಲಿ 5, ಯಲ್ಲಾಪುರದಲ್ಲಿ 12, ಮುಂಡಗೋಡ 5, ಹಳಿಯಾಳದಲ್ಲಿ 1, ಮತ್ತು ಜೋಯಿಡಾದಲ್ಲಿ 3 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಸಾಲಮನ್ನಾ ಜನತೆಗೆ ಬೀಳಲಿದೆ ಹೊರೆ! ಏನಾಗುತ್ತೋ ಕಾದು ನೋಡಬೇಕಿದೆ!

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 980 ಆಗಿದ್ದು, ಅವರಲ್ಲಿ 102 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 878 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 24, ಅಂಕೋಲಾ‌ 14, ಕುಮಟಾ 28, ಹೊನ್ನಾವರ 20, ಭಟ್ಕಳ 26, ಶಿರಸಿ 24, ಸಿದ್ದಾಪುರ 2, ಯಲ್ಲಾಪುರ 5, ಮುಂಡಗೋಡ 31, ಹಳಿಯಾಳ 13, ಜೋಯ್ಡಾ 0 ಜನರು ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 187 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಬೈಕ್ ಗೆ ಡಿಕ್ಕಿ ಹೊಡೆದ ಗ್ಯಾಸ್ ಟ್ಯಾಂಕರ್ : ಬೈಕ್ ಸವಾರ ಸಾವು

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.