ಹೊನ್ನಾವರ : ಶಾಲಾ ದಾಖಲಾತಿ ಹೆಚ್ಚಳ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಪ್ರಮುಖ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ರೂಪಿಸಿರುವ ಬಹುನಿರೀಕ್ಷಿತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020 ಕ್ಕೆ ಕೇಂದ್ರ ಸಚಿವ ಸಂಪುಟ ಸಹ ಈಗಾಗಲೇ ಅನುಮೋದನೆ ನೀಡಿದೆ.

ನೂತನ ಶಿಕ್ಷಣ ನೀತಿ ಜಾರಿಗೆ ಸರ್ಕಾರ ರಚಿಸಿರುವ ವಿಜ್ಞಾನ ಮತ್ತು ಗಣಿತ ಶಾಸ್ತ್ರ ತಜ್ಞರ ಸಮಿತಿಯಲ್ಲಿ ಹೊನ್ನಾವರದ ಗುಣವಂತೆ ಮೂಲದ, ಬೆಂಗಳೂರು ನಿವಾಸಿಯಾದ, ಸಂಖ್ಯಾಶಾಸ್ತ್ರ ಪರಿಣತ, ಬೆಂಗಳೂರು ವಿಶ್ವವಿದ್ಯಾಲಯದ ಪೊಫೆಸರ ಡಾ. ಪರಮೇಶ್ವರ ವಿ ಪಂಡಿತರ ಆಯ್ಕೆಯಾದದ್ದುರಿಂದ ಇದು ಉತ್ತರ ಕನ್ನಡಕ್ಕೆ ಸಂದ ವಿಶೇಷ ಗೌರವ ಎನ್ನಲಾಗಿದೆ.

RELATED ARTICLES  ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ!

ಸದ್ಯ ಇವರು ಬೆಂಗಳೂರು ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರ ಅಧ್ಯಯನ ಮಂಡಳಿಯ ಅಧ್ಯಕ್ಷರಾಗಿ ಸೇವ ಸಲ್ಲಿಸುತ್ತಿದು.
ಅಲ್ಲದೆ ಭಾರತದ ಹಲವು ವಿಶ್ವವಿದ್ಯಾಲಯದ ಅಧ್ಯಯನ ಮತ್ತು ನೇಮಕಾತಿ ಮಂಡಳಿಯ ಸದಸ್ಯರಾಗಿ ಕಾರ್ಯ ಅನುಭವ ಇದೆ.

RELATED ARTICLES  What exactly Mutually Useful Relationship?

ಈ ಕ್ಷೇತ್ರದಲ್ಲಿ 32 ವರ್ಷ ಸೇವೆ 85 ಕ್ಕೂ ಹೆಚ್ಚಿನ ಅಧ್ಯಯನ ಲೇಖನ ಮತ್ತು 10 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಉತ್ತರಕನ್ನಡದ ಮೂಲದ ಇವರ ಆಯ್ಕೆಯ ಬಗ್ಗೆ ಉತ್ತರಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಇವರು ಈಗಾಗಲೇ ದೇಶ ವಿದೇಶದಲ್ಲಿ ಸಂಖ್ಯಾಶಾಸ್ತ್ರದ ಮೇಲೆ 75 ಕ್ಕೂ ಹೆಚ್ಚಿನ ಉಪನ್ಯಾಸ ನೀಡಿದವರು. ಇವರ ಸಾಧನೆಗೆ ಗಣ್ಯರು ಅಭಿನಂದನೆ ಸಲ್ಲಿಸಿದ್ದು, ಯಶಸ್ಸು ಸಿಗಲೆಂದು ಶುಭ ಹಾರೈಸಿದ್ದಾರೆ.