ಕುಮಟಾ: ಸಾಧನೆಗೆ ವಯಸ್ಸಿನ ಮಿತಿಯಿಲ್ಲ, ಮಾನವ ಹುಟ್ಟಿದಾಗಿನಿಂದ ಆತನ ಸಾಧನೆ ಪ್ರಾರಂಭವಾಗುತ್ತದೆ. ಮುಗ್ದ ಮಗುವೊಂದು ಸಾಧನೆಮಾಡಿ ದೊಡ್ಡವರೂ ಹುಬ್ಬೇರಿಸುವಂತೆ ಮಾಡಿ ಸಾಧಕರ ಸಾಲಿನಲ್ಲಿ ಸೇರಿದವಳು ಪುಟಾಣಿ ದ್ಯುತಿ.
ಎರಡು ವರ್ಷದ ಪುಟಾಣಿ ಬಾಲಕಿ ದ್ಯುತಿ ವಿನೋದ ರಾವ್ ಇಂಡಿಯಾ ಬುಕ್ ಬುಕ್ ಆಫ್ ರೆಕಾಡ್ರ್ಸ್ ಆಯ್ಕೆ ಆಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.
ತಾಲೂಕಿನ ಹೆರವಟ್ಟಾದ ವಿನೋದ ರಾವ್ ಮತ್ತು ರಂಜನಾ ದಂಪತಿ ಮಗಳಾದ ದ್ಯುತಿ ವಿನೋದ ರಾವ್ ಚಿಕ್ಕ ವಯಸ್ಸಿನಲ್ಲಿಯೇ ಬುದ್ಧಿಶಕ್ತಿ ಮತ್ತು ಅಪಾರ ನೆನಪಿನ ಶಕ್ತಿ ಹೊಂದಿದ್ದಾಳೆ.
35 ಪ್ರಾಣಿಗಳು, 15 ಪಕ್ಷಿಗಳು, 12 ರೀತಿಯ ಬಣ್ಣಗಳು, 30 ರೀತಿಯ ತಿಂಡಿಗಳು, 23 ತರಕಾರಿಗಳು, 20 ರೀತಿಯ ಹಣ್ಣುಗಳು, 17 ರೀತಿಯ ಹೂಗಳು, 16 ವಾಹನಗಳು, 12 ರೀತಿಯ ಆಕೃತಿಗಳು, 20 ಜನ ರಾಜಕಾರಿಣಿಗಳು, 13 ಜನ ಸ್ವಾತಂತ್ರ್ಯ ಹೋರಾಟಗಾರರು, 18 ಜಾತಿಯ ಕೀಟಗಳು, 15 ಜನ ಕ್ರಿಕೇಟರ್ ಗಳು, 35 ಜನ ಸೆಲಬ್ರಿಟಿಗಳು, 8 ಜನ ಮಹಿಳಾ ಸಾಧಕರು, 29 ರಾಜ್ಯಗಳು, 20 ಜಾತಿಯ ನಾಯಿಗಳು, 1 ರಂದ 20 ರವರೆಗಿನ ಹಿಂದಿ ಸಂಖ್ಯೆಗಳು, 1 ರಿಂದ 10 ರ ವರೆಗಿನ ಅಂಗ್ಲಾ ಸಂಖ್ಯೆಗಳು, 1 ರಿಂದ 10 ರ ವರೆಗಿನ ಕನ್ನಡ ಸಂಖ್ಯೆಗಳು, ಎಬಿಸಿಡಿ ಯಿಂದ ಝಡ್ ವರೆಗೆ 2 ಇಂಗ್ಲೀಷ್ ರೈಮ್ಸ್, 2 ಭಗವದ್ಗೀತೆಯ ಶ್ಲೋಕಗಳು, 12 ತಿಂಗಳುಗಳು, ವಾರದ 7 ದಿನಗಳು, ಹಾಗೂ ವಿವಿಧ ಅಂತರಾಷ್ಟ್ರೀಯ 280 ಕ್ಕು ಹೆಚ್ಚಿನ ಕಂಪನಿಗಳ ಲೋಗೊಗಳನ್ನು ಗುರುತಿಸುತ್ತಾಳೆ.
ದ್ಯುತಿ ವಿನೋದ ರಾವ್ ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿಗೆ ಇಂಡಿಯಾ ಬುಕ್ ಅಫ್ ರೆಕಾಡ್ರ್ಸ್ ನಲ್ಲಿ ಸ್ಥಾನ ಪಡೆದಿದ್ದಾಳೆ. ಚಿಕ್ಕ ವಯಸ್ಸಿನ ಮಕ್ಕಳ ಬುದ್ಧಿಶಕ್ತಿ ಗಮನಿಸಿ ಈ ಸಂಸ್ಥೆಗಳು ಪ್ರಶಸ್ತಿ ನೀಡಿವೆ. ಈಕೆಯ ಯಶಸ್ಸು ಹಾಗೂ ಕೀರ್ತಿ ಹೀಗೆಯೇ ಮುಂದುವರೆಯಲಿ ಎಂದು ಹಾರೈಸೋಣ.