ಭಟ್ಕಳ: ಲಾಕ್ ಡೌನ್ ನಡುವೆ ತಗ್ಗಿದ್ದ ಕಳ್ಳತನ ಪ್ರಕರಣಗಳು ಇದೀಗ ಮತ್ತೆ ವರದಿಯಾಗುತ್ತಿದ್ದು, ದೇವಾಲಯಗಳ ಮೇಲೆಯೇ ಕಣ್ಣು ಹಾಕಿರುವ ಖಧೀಮರು ಕಳ್ಳತನಕ್ಕೆ ಯತ್ನ ನಡೆಸಿದ ಘಟನೆ ಭಟ್ಕಳದಲ್ಲಿ ವರದಿಯಾಗಿದೆ.

ಕೋಟೇಶ್ವರ ರಸ್ತೆಯಲ್ಲಿರುವ ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ಕಳ್ಳತನಕ್ಕೆ ವಿಫಲಯತ್ನ ನಡೆದಿದ್ದು ದೇಗುಲದಲ್ಲಿ ಅಳವಡಿಸಿರುವ ಸಿ.ಸಿ.ಕ್ಯಾಮೆರಾದಲ್ಲಿ ಕಳ್ಳನ ದೃಶ್ಯಗಳನ್ನು ಸೆರೆ ಯಾಗಿದ ಘಟನೆ ನಡೆದಿದೆ. ಈ ಬಗ್ಗೆ ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ಭಾನುವಾರ ಮಧ್ಯರಾತ್ರಿ ಕಳ್ಳನು ಕೋಟೇಶ್ವರ ರಸ್ತೆಯಲ್ಲಿರುವ ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ಹಿಂಬದಿಯಲ್ಲಿರುವ ಬಾಗಿಲನ್ನು ತೆರೆದು ಪ್ರವೇಶಿಸಿದ್ದಾನೆ ಎನ್ನಲಾಗಿದ್ದು ಈ ಬಗ್ಗೆ ದೃಷ್ಯಗಳು ಸೆರೆಯಾಗಿದೆ.

RELATED ARTICLES  ಕುಮಟಾದಲ್ಲಿ ಸುಂದರವಾಗಿ ಮೂಡಿಬರಲಿದೆ “ನುಡಿ ಹಬ್ಬ”! ನಡೆದಿದೆ ಪೂರ್ವ ಸಿದ್ಧತೆ.

ದೇವಸ್ಥಾನದಲ್ಲಿ ಕ್ಕೆ ಅಳವಡಿಸಿದ ಸಿ.ಸಿ ಕ್ಯಾಮರಾವನ್ನು ಒಡೆದು ಹಾನಿಪಡಿಸಿ, ದೇವಸ್ಥಾನದ ಒಳಗಡೆ ಇದ್ದ ಕಾಣಿಕೆ ಡಬ್ಬಿಯಲ್ಲಿನ ಹಣವನ್ನು ಕಳುವು ಮಾಡಲು ಕಾಣಿಕೆಯನ್ನು ಒಡೆಯಲು ಪ್ರಯತ್ನಿಸಿದಾನೆ ನಂತರ ಹುಂಡಿಗಳನ್ನು ತೆರೆಯಲು ವಿಫಲ ಯತ್ನ ನಡೆದಿದೆ.

ಇಷ್ಟೆಲ್ಲಾ ಪ್ರಯತ್ನಿಸಿದ ನಂತರವೂ ಯಾವ ವಸ್ತು, ನಗ-ನಾಣ್ಯವೂ ದೊರಕದಿದ್ದರಿಂದ ಕಳ್ಳನು ಅಲ್ಲಿಂದ ತೆರಳಿದ್ದಾನೆ ಎನ್ನಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಮೋಹನ ಭದ್ರಾ ಶಿರಾಲೇಕರ ದೂರು ನೀಡಿದ್ದು ದೂರು ದಾಖಲಿಸಿ ಕೊಂಡ ಪಿ.ಎಸ್.ಐ. ಹೆಚ್. ಕುಡಗುಂಟಿ ಸ್ಥಳಕ್ಕೆ ಭೇಟಿ ನೀಡಿ ತನಿಖೆಗಾಗಿ ದೇವಸ್ಥಾನದ ಸಿಸಿ ಕ್ಯಾಮೆರಾದ ದೃಶ್ಯ ವನ್ನು ಪೋಲೀಸರು ಪಡೆದುಕೊಂಡಿದ್ದಾರೆ.

RELATED ARTICLES  ಬೋಟ್ ಸಮೀಪವೇ ಬೃಹತ್  ಆಕಾರದ ತಿಮಿಂಗಿಲ : ವೀಡಿಯೋ ವೈರಲ್..!

ಕಳ್ಳನ ಪತ್ತೆಗಾಗಿ ನಗರ ಠಾಣೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದ್ದಾರೆ. ಕಳ್ಳನು ಬಹುತೇಕ ಮುಖ ಮುಚ್ಚಿಕೊಂಡಿದ್ದು ಅಸಲಿ ಚಿತ್ರ ಪಡೆಯಲು ಕಷ್ಟಕರವಾಗಿದೆ ದೇವಸ್ಥಾನದಲ್ಲಿ ಕಳ್ಳತನಕ್ಕೆ ವಿಫಲಯತ್ನ ನಡೆದಿದ್ದು ದೇಗುಲದಲ್ಲಿ ಅಳವಡಿಸಿರುವ ಸಿ.ಸಿ.ಕ್ಯಾಮೆರಾದಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆದಿದೆ.