ಗೋಕರ್ಣ : ಜಿಲ್ಲೆಯ ವಿವಿಧಡೆ ನಡೆದ ಮನೆಗಳ್ಳತನ ಮತ್ತಿತರ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ 19 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇತರ ಸ್ವತ್ತು ವಶಪಡಿಸಿಕೊಂಡಿದ್ದಾರೆ.

ಪರಿಸ್ಥಿತಿ ಲಾಭ ಪಡೆದು ಜನವಸತಿ ಇರದ ಮನೆಗಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿ ಜಿಲ್ಲೆಯ ವಿವಿಧೆಡೆ ಒಂದಾಂದ ನಂತರ ಒಂದು ಕಳ್ಳತನ ನಡೆಸುತ್ತಲೇ ಬಂದಿದ್ದ ತರುಣರ ಗ್ಯಾಂಗ್ ಒಂದನ್ನು ಅಂತೂ ಇಂತೂ ತಮ್ಮ ಬಲೆಯೊಳಗೆ ಸಿಲುಕಿಸಿ ಕಾನೂನಿನ ಕುಣಿಕೆ ತೊಡಿಸಿದ ಪೊಲೀಸರ ಕಾರ್ಯಕ್ಕೆ ನಾಗರಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕುಮಟಾ ಸಿಐಐ ಶಿವಪ್ರಕಾಶ ನಾಯ್ಕ ನೇತ್ರತ್ವದಲ್ಲಿ ಗೋಕರ್ಣ ಪಿ. ಎಸ್.ಐ ನವೀನ್ ನಾಯ್ಕ, ಸೇರಿದಂತೆ ಕಾರವಾರ -ಅಂಕೋಲಾ ಹಾಗೂ ಗೋಕರ್ಣ ಠಾಣಾ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಯಶಸ್ವೀ ಕಾರ್ಯಾಚರಣೆಗೆ ಎಸ್ಪಿ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.

ಅಂಕೋಲಾ ತಾಲೂಕಿನ ಬೊಬ್ರವಾಡ ಗ್ರಾಮದ ಪ್ರಶಾಂತ ಕಿಶೋರ ನಾಯ್ಕ (23)
ತೆಂಕಣಕೇರಿಯ ಹರ್ಷ ನಾಗೇಂದ್ರ ನಾಯ್ಕ (22) ಕೇಣಿಯ ರಾಹುಲ್ ಕೃಷ್ಣಾನಂದ ಬಂಟ (22) ಶಿರಕುಳಿಯ ಗಣೇಶ ಮಾರುತಿ ನಾಯ್ಕ (24), ಶಿರಸಿ ತಾಲೂಕಿನ ಕಸ್ತೂರ್ಬಾ ನಗರ ನಿವಾಸಿಗಳಾದ ಶ್ರೀಕಾಂತ ಗಣಪತಿ ದೇವಾಡಿಗ (27) ನಿಹಾಲ ಗೋಪಾಲಕೃಷ್ಣ ದೇವಳಿ (26) ಸಂದೀಪ ಹನುಮಂತ ಮರಾಠಿ (25) ಬಂಧಿತರು.

RELATED ARTICLES  ಕಾರವಾರ ಕದಂಬ ನೌಕಾನೆಲೆಗೆ ಶಾಸಕರ ಭೇಟಿ!

ಕಳೆದ ವರ್ಷದಿಂದೀಚೆಗೆ ಕಾರವಾರ -ಅಂಕೋಲಾ ಹಾಗೂ ಗೋಕರ್ಣ ಸುತ್ತಮುತ್ತಲ ಪ್ರದೇಶಗಳಲ್ಲಿ ಅನೇಕ ಕಳ್ಳತನ ಪ್ರಕರಣ ದಾಖಲಾಗುತ್ತಿದ್ದರೂ, ಕಳ್ಳರ ಪತ್ತೆ ಕಾರ್ಯ ಇಲಾಖೆಗೆ ಸವಾಲಿನ ಕೆಲಸವಾಗಿತ್ತು. ಕೋವಿಡ್ ಮತ್ತಿತರ ಕಾರಣಗಳ ಜವಾಬ್ದಾರಿ ನಿರ್ವಹಣೆ, ಒತ್ತಡ, ಶಂಕಿತರನ್ನು ಒಮ್ಮೆಲೇ ಬಂಧಿಸಲಾಗದ ಅಸಹಾಯಕತೆ ಮತ್ತಿತರ ಕಾರಣಗಳಿಂದ ತನಿಖೆ ನಿರ್ದಿಷ್ಟ ವೇಗದಲ್ಲಿ ಸಾಗಿರಲಿಲ್ಲ ಎನ್ನಲಾಗಿದೆ.

ಯುವಕರು ಕದ್ದು ತಂದ ಬಂಗಾರ ಮತ್ತು ಆಭರಣಗಳನ್ನು ಖರೀದಿಸುತ್ತಿದ್ದ ಶಿರಸಿ ಬನವಾಸಿ ರಸ್ತೆಯ ಅಶೋಕ ರಾಯ್ಕರ್ (40) ನನ್ನು ಇದೇ ವೇಳೆ ಬಂಧಿಸಲಾಗಿದ್ದು ಒಟ್ಟೂ 8 ಆರೋಪಿಗಳನ್ನೊಳಗೊಂಡ ಖತರ್ನಾಕ ಗ್ಯಾಂಗ್ ಅರೆಸ್ಟ್ ಆಗಿದೆ.

ಬಂಧಿತರು ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5, ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11 ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣಗಳು ಸೇರಿದಂತೆ ಒಟ್ಟು 18 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು ಆರೋಪಿಗಳಿಂದ 351 ಗ್ರಾಂ ಬಂಗಾರದ ಆಭರಣ, 1 ಕೆ.ಜಿ ಬೆಳ್ಳಿ ಆಭರಣ, 5 ಗ್ಯಾಸ್ ಸಿಲೆಂಡರ್ , 8 ಮೊಬೈಲ್ ಪೋನ್ ಗಳು ,3 ಬೈಕುಗಳು ಸೇರಿ ಸೇರಿದಂತೆ 19 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇವರು ಕಳ್ಳತನ ನಡೆಸುವ ವೇಳೆ ಯಾರಾದರೂ ಅಡ್ಡಬಂದರೆ ಹೆದರಿಸಲು ಏರ್ ಗನ್ ಸಹಬಳಸುತ್ತಿದ್ದರು ಎನ್ನಲಾಗಿದ್ದು, ಕಳ್ಳತನ ಕೃತ್ಯಕ್ಕೆ ಬಳಸಿದ ಇತರೆ ವಸ್ತುಗಳ ಜೊತೆ ಏರ್ ಗನ್ನನ್ನು ಸಹ ಪೋಲೀಸರು ವಶಪಡಿಸಿಕೊಂಡಿದ್ದಾರೆ.

RELATED ARTICLES  ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ಅವಶ್ಯಕ-ಜಿ.ಎಸ್.ನಟೇಶ

ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜು ಸೋಮವಾರ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ, ‘ ಡಿವೈಎಸ್ಪಿ ಬದರಿನಾಥ್, ಭಟ್ಕಳ ಡಿ.ವೈ.ಎಸ್. ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಕುಮಟಾ ಸಿ.ಪಿ.ಐ ಶಿವಪ್ರಕಾಶ ನಾಯ್ಕ, ಗೋಕರ್ಣ ಪಿ.ಎಸ್.ಐ ನವೀನ್ ನಾಯ್ಕ, ಅಂಕೋಲಾ ಪಿ.ಎಸ್. ಐ ಪ್ರವಿಣಕುಮಾರ್ ಮತ್ತು ಗೋಕರ್ಣ, ಅಂಕೋಲಾ ಕಾರವಾರ ಠಾಣೆಗಳ ವಿವಿಧ ಅಧಿಕಾರಿ ಮತ್ತುಸಿಬ್ಬಂದಿಗಳು ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ. ವ್ಯಕ್ತಪಡಿಸಿದ್ದಲ್ಲಿದೇ, ಐಟಿಐ ಶಿಕ್ಷಣ ಕಲಿತು ಬದುಕು ಕಟ್ಟಿಕೊಳ್ಳ ಬೇಕಾದ ಬಹುತೇಕ ತರುಣರು ಕಳ್ಳತನ ಕೃತ್ಯಕ್ಕಿಳಿದ ಬಗ್ಗೆ ಖೇದ ವ್ಯಕ್ತ ಪಡಿಸಿದರು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗೋಕರ್ಣ ಪಿ ಎ ಸೈ ನವೀನ್ ನಾಯ್ಕ ವಿಶೇಷ ಚಾಕಚಕ್ಯತೆ ತೋರಿಸಿ, ಗೋಕರ್ಣ ಹಾಗೂ ಅಂಕೋಲಾ ಠಾಣಾ ಸಿಬ್ಬಂದಿಗಳನ್ನೊಳಗೊಂಡ ತಂಡದೊಂದಿಗೆ ಮಹತ್ವದ ಸುಳಿವು ಕಲೆಹಾಕಿ, ಕಳ್ಳರ ಗ್ಯಾಂಗ್ ಪತ್ತೆಗೆ ಅವಿರತ ಶ್ರಮವಹಿಸಿದ್ದರಿಂದ ಅಂಕೋಲಾದ ಶೆಟಗೇರಿ, ಕಣಗಿಲ್, ಬೆಳಸೆ, ಬಾಸಗೋಡ – ಶಿಂಗನಮಕ್ಕಿ, ಇತ್ತೀಚೆಗೆ ನಡೆದ ತೆಂಕಣಕೇರಿ ಮನೆಗಳ್ಳತನ ಸೇರಿ ತಾಲೂಕಿನ 11 ಪ್ರಕರಣಗಳನ್ನು ಭೇದಿಸಲು ಸಾಧ್ಯವಾಗಿರುವುದಕ್ಕೆ, ಸ್ಥಳೀಯ ನಾಗರಿಕರನೇಕರು ಹಾಗೂ ಸಂಬಂಧಿಸಿದ ಆಭರಣವನ್ನು ಈ ಹಿಂದೆ ಕಳೆದುಕೊಂಡಿದ್ದ ಕೆಲ ಕುಟುಂಬ ವರ್ಗದವರು ಪೊಲೀಸ್ ಇಲಾಖೆ ಕುರಿತು ಮೆಚ್ಚುಗೆ ಸೂಚಿಸುತ್ತಿದ್ದಾರೆ.