ಶಿರಸಿ: ಕೊರೋನಾದಿಂದಾಗಿ ಒಂದಿಲ್ಲೊಂದು ನೋವಿನ ಘಟನೆಗಳು ವರದಿಯಾಗುತ್ತಿದೆ. ಕೊರೋನಾ ಅನೇಕರ ಜೀವನವನ್ನು ಹಾಳುಮಾಡಿದ್ದಲ್ಲದೆ ಕೆಲವರನ್ನು ಅನಾಥರಾಗಿಸಿದೆ.

ತನ್ನ ಅಳಿಯ ಕೊರೊನಾದಿಂದ ಸಾವು ಕಂಡಿದ್ದು ಮುಂದೆ ತನ್ನ ಮಗಳ ಜೀವನ ಹೇಗೆ ಎಂದು ವ್ಯಕ್ತಿಯೋರ್ವ ಮನನೊಂದು ಮನೆಯಲ್ಲಿ ಇದ್ದ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಕನಾಳದಲ್ಲಿ ನಡೆದಿದೆ.

RELATED ARTICLES  ಕಾರವಾರ ಸಗಟು ಮಳಿಗೆಯಲ್ಲಿ ಅಸಮರ್ಪಕ ಮಾಹಿತಿ: ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು.

ನಿಂಗಪ್ಪ ಕೆರಿಯಾ ನಾಯ್ಕ ಎಂಬುವರೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ತನ್ನ ಅಳಿಯ ಒಂದು ತಿಂಗಳ ಹಿಂದೆ ಕೊರೊನಾ ರೋಗಕ್ಕೆ ತುತ್ತಾಗಿ ಸಾವು ಕಂಡಿದ್ದ. ಇದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ಮಾವ ನಿಂಗಪ್ಪ ವಿಪರೀತ ಸರಾಯಿ ಕುಡಿಯುವ ಚಟಕ್ಕೆ ದಾಸನಾಗಿದ್ದ.

RELATED ARTICLES  ಅಯ್ಯಪ್ಪಸ್ವಾಮಿ ಧ್ವಜಾರೋಹಣದಲ್ಲಿ ಭಾಗವಹಿಸಿದ ಸುನಿಲ್ ನಾಯ್ಕ.

ಅದೇ ರೀತಿ ಶನಿವಾರ ಸಂಜೆ ಎಲ್ಲರೂ ಊಟ ಮಾಡುತ್ತಿರುವ ಸಂದರ್ಭದಲ್ಲಿ ಮನೆಯ ಹಿಂದುಗಡೆ ಹೋಗಿ ಸರಾಯಿ ಎಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬನವಾಸಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ.ಎಸ್.ಐ. ಹನುಮಂತ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.