ಕುಮಟಾ : ಒಂದೆಡೆ ಅಕ್ರಮ ಗೋ ಸಾಗಾಣಿಕೆಯ ಜಾಲವನ್ನು ಪೊಲೀಸರು ಬೀದಿ ಸುತ್ತಿದ್ದು ಹೆಡೆಮುರಿ ಕಟ್ಟುತ್ತಿದ್ದರೆ ಇನ್ನೊಂದೆಡೆ ಗೋಮಾಂಸ ಸಾಗಾಟದ ಜಾಲ ಪೊಲೀಸ್ ಬಲೆಗೆ ಬೀಳುತ್ತಿದೆ.
ಅಕ್ರಮವಾಗಿ ಕಂಟೇನರ್ ಮೂಲಕ ಗೋ ಮಾಂಸ ಸಾಗಾಟ ಮಾಡುತ್ತಿರುವ ಕಂಟೇನರ್ ಅನ್ನು ವಶಪಡಿಸಿಕೊಂಡು, ಮೂರು ಟನ್ ಗೋ ಮಾಂಸ ವಶಪಡಿಸಿಕೊಂಡ ಘಟನೆ ಕುಮಟಾದಲ್ಲಿ ನಡೆದಿದೆ.
ಪೋಲೀಸರ ಬಿರುಸಿನ ಕಾರ್ಯಾಚರಣೆಯಿಂದಾಗಿ ಮೀನು ಸಾಗಣೆ ಹೆಸರಿನಲ್ಲಿ ಹಾನಗಲ್ ನಿಂದ ಮಂಗಳೂರಿಗೆ ಸಾಗಿಸುತ್ತಿದ್ದ ಕಂಟೇನರ್ ನಲ್ಲಿ 3 ಟನ್ ಗೋಮಾಂಸ ಸಾಗಿಸುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.
ಕುಮಟಾ ಹೊಳೆಗದ್ದೆ ಟೊಲ್ ಗೇಟ್ ಬಳಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೀನು ಸಾಗಾಣಿಕೆಯ ಕಂಟೇನರ್ ನಲ್ಲಿ ಐಸ್ ಗಳನ್ನೂ ಇಟ್ಟು ಜೊತೆಗೆ ಗೋ ಮಾಂಸ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತಪಾಸಣೆ ನಡೆಸುವ ವೇಳೆ ಗೋ ಮಾಂಸ ಕಳ್ಳ ಸಾಗಣೆಯ ಬಗ್ಗೆ ತಿಳಿದಿದೆ.
ಈ ಕುರಿತು ಕಂಟೇನರ್ ಚಾಲಕ ಹಾನಗಲ್ ನಿವಾಸಿ ಮಹಮ್ಮದ ಶಾಹೀದ್ ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡ ಕುಮಟಾ ಪೋಲಿಸರು ತನಿಖೆ ಕೈಗೊಂಡಿದ್ದಾರೆ.
ಈ ರೀತಿ ಕೃತ್ಯದಲ್ಲಿ ಭಾಗವಹಿಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಿ ಆದಷ್ಟು ಶೀಘ್ರವಾಗಿ ಅವರನ್ನು ಬಂಧಿಸಬೇಕು ಎನ್ನುವುದು ಗೋ ಪ್ರೇಮಿಗಳ ಆಗ್ರಹವಾಗಿದೆ.