ಭಟ್ಕಳ: ಕಂಟೇನರ್ ಒಂದರಲ್ಲಿ ಟನ್ ಗಟ್ಟಲೆ ಅಕ್ರಮ ದನದ ಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣ ಒಂದೆಡೆ ಪೊಲೀಸರಿಂದ ಬೇಧಿಸಲ್ಪಟ್ಟರೆ ಇನ್ನೊಂದೆಡೆ ಹೋರಿಯನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಹೋರಿಯೊಂದನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಮುರುಡೇಶ್ವರಕ್ಕೆ ಬರುತ್ತಿದ್ದ ಮಾರುತಿ ಓಮಿನಿ ಕಾರನ್ನು ತಡೆದ ಪೊಲೀಸರು, ವಾಹನದ ಸಮೇತ ಆರೋಪಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಬೈಲೂರು ದೊಡ್ಡಬಲಸೆ ಸೇತುವೆ ಸಮೀಪ ನಡೆದಿದೆ.

RELATED ARTICLES  ಬಲಿಷ್ಠವಾದ ಸಮಾಜವನ್ನು ನಿರ್ಮಿಸುವಲ್ಲಿ ಸಂಘಟನೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ :- ನಾಗರಾಜ ನಾಯಕ ತೊರ್ಕೆ

ಬಂಧಿತ ಆರೋಪಿಯನ್ನು ತಾಲೂಕಿನ ಮುರುಡೇಶ್ವರ ನ್ಯಾಶನಲ್ ಕಾಲೋನಿಯ ನಿವಾಸಿ ಮಹ್ಮದ್ ಫರ್ವೇಜ್ ಎಂದು ಗುರುತಿಸಲಾಗಿದೆ.ಈತ ತೂದಳ್ಳಿಯಿಂದ ಮುರುಡೇಶ್ವರಕ್ಕೆ ಹೋರಿಯನ್ನು ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ.

RELATED ARTICLES  ರಾಮ‌ಮಂದಿರ ನಿಧಿ ಸಮರ್ಪಣ ಅಭಿಯಾನಕ್ಕೆ ಕುಮಟಾದಲ್ಲಿ ಚಾಲನೆ

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ
ಹಾಜರುಪಡಿಸಲಾಗಿದ್ದು,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರವೀಂದ್ರ ಬಿರಾದಾರ ತನಿಖೆ ಕೈಗೊಂಡಿದ್ದಾರೆ.