ಕುಮಟಾ: ಪತ್ರಿಕಾ ದಿನಾಚರಣೆ ಪ್ರಯುಕ್ತ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ಘಟಕವು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಆನ್ ಲೈನ್ ಭಾಷಣ ಸ್ಪರ್ಧೆಯಲ್ಲಿ ಸೃಜನಾ ನಾಯಕ ಮತ್ತು ಚಿತ್ರಾವತಿ ಮುಕ್ರಿ ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾರೆ.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ, ಪುರಸಭೆ ಹಾಗೂ ಅರಣ್ಯ ಇಲಾಖೆ ಜಂಟಿ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ಕಸ ವಿಂಗಡಣೆ ಮತ್ತು ಪಟ್ಟಣದ ಸ್ವಚ್ಛತೆಯಲ್ಲಿ ಸಾರ್ವಜನಿಕರ ಪಾತ್ರ” ಎಂಬ ವಿಷಯದ ಮೇಲೆ ಆನ್ ಲೈನ್ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಸಿವಿಎಸ್‌ಕೆ ಪ್ರೌಢಶಾಲೆಯ ಸ್ರುಜನಾ ದತ್ತಾ ನಾಯಕ, ವನ್ನಳ್ಳಿ ಪ್ರಥಮ ಸ್ಥಾನ, ಸಿವಿಎಸ್‌ಕೆ ಯ, ಅಕ್ಷತಾ ವಿನಾಯಕ ಶಾನಭಾಗ ಬಾಳೇರಿ ದ್ವಿತೀಯ,
ಹೆಗಡೆ ಶಾಂತಿಕಾಂಬ ಪ್ರೌಢಶಾಲೆಯ ವೇಣುಗೋಪಾಲ ಮಧುಕೇಶ್ವರ ಹೆಗಡೆ ತೃತೀಯ ಹಾಗೂ ಸಿವಿಎಸ್‌ಕೆ ಯ, ಎಚ್.ಜಿ ಭೂಮಿಕಾ, ವನ್ನಳ್ಳಿ ನಾಲ್ಕನೇ ಸ್ಥಾನ ಗೆದ್ದುಕೊಂಡಿದ್ದಾರೆ.
ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ “ಅಪಾಯದಲ್ಲಿರುವ ಅರಣ್ಯ ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ” ಎಂಬ ವಿಷಯದ ಮೇಲೆ ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ಹೆಗಡೆ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ಚಿತ್ರಾವತಿ ಮಾಸ್ತಿ ಮುಕ್ರಿ ಪ್ರಥಮ, ಧಾರೇಶ್ವರದ ದಿನಕರ ಇಂಗ್ಲಿಷ್ ಮಿಡಿಯಮ್ ಹೈಸ್ಕೂಲಿನ ಮಾನಸಾ ಗಣಪತಿ ಪಟಗಾರ ದ್ವಿತೀಯ, ಹೆಗಡೆ ಕೆ.ಜಿ.ಎಸ್ ನ ಸುಹಾಸಿನಿ ಜಿ ಪೈ ತೃತೀಯ ಸ್ಥಾನ ಗೆದ್ದಿದ್ದಾರೆ.