ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ಇಂದು 59 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಮೂವರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಒಂದೊಂದು ಸಾವಾಗಿದೆ.

ಕಾರವಾರದಲ್ಲಿ 6, ಅಂಕೋಲಾದಲ್ಲಿ 3, ಕುಮಟಾದಲ್ಲಿ 12, ಹೊನ್ನಾವರ 12, ಭಟ್ಕಳದಲ್ಲಿ 5, ಶಿರಸಿಯಲ್ಲಿ 14, ಸಿದ್ದಾಪುರದಲ್ಲಿ 0, ಯಲ್ಲಾಪುರದಲ್ಲಿ 4, ಮುಂಡಗೋಡ 1, ಹಳಿಯಾಳದಲ್ಲಿ 2, ಮತ್ತು ಜೋಯಿಡಾದಲ್ಲಿ 0 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಪೆಂಡಾಲ್ ಗೋದಾಮಿಗೆ ಆಕಸ್ಮಿಕ ಬೆಂಕಿ : ಸುಟ್ಟು ಕರಕಲಾದ ವಸ್ತುಗಳು

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 599 ಆಗಿದ್ದು, ಅವರಲ್ಲಿ 76 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 523 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 3, ಅಂಕೋಲಾ‌ 8, ಕುಮಟಾ 26, ಹೊನ್ನಾವರ 16, ಭಟ್ಕಳ 03, ಶಿರಸಿ 10, ಸಿದ್ದಾಪುರ 4, ಯಲ್ಲಾಪುರ 0, ಮುಂಡಗೋಡ 7, ಹಳಿಯಾಳ 17, ಜೋಯ್ಡಾ 0 ಜನರು ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 94 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಆರು ಗ್ರಾಮಗಳಿಗೆ ಇನ್ನೂ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ: ಹೋರಾಟದ ಹಾದಿ ಹಿಡಿದ ಗ್ರಾಮಸ್ಥರು.

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.