ಕಾರವಾರ: ನರೇಗಾ ಯೋಜನೆಯಡಿ ಜಿಲ್ಲೆಯ 8 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕ ಮಿತ್ರ ಹುದ್ದೆಗಳ ಭರ್ತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೀಯಾಂಗ ಎಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಲ್ಲಾಪುರ ತಾಲೂಕಿನ ಇಡಗುಂದಿ, ಕುಂದರಗಿ ಮತ್ತು ಮಾವಿನಮನೆ. ಮುಂಡಗೋಡ ತಾಲೂಕಿನ ಹನುಮಾಪುರ, ಇಂದೂರು. ಶಿರಸಿಯ ಬದನಗೋಡ, ಹಳಿಯಾಳದ ಗುಂಡೊಳ್ಳಿ ಹಾಗೂ ಕಾರವಾರದ ದೇವಳಮಕ್ಕಿ ಗ್ರಾಮ ಪಂಚಾಯತ್‍ಗಳಲ್ಲಿನ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ದಿನವಾಗಿರುತ್ತದೆ.

RELATED ARTICLES  ಶಿಕ್ಷಕ/ ಶಿಕ್ಷಕಿಯರು ಬೇಕಾಗಿದ್ದಾರೆ

ಅರ್ಜಿ ಸಲ್ಲಿಸಬಯಸುವರು ಕನಿಷ್ಠ 10ನೇ ತರಗತಿ ಉತ್ತಿರ್ಣರಾಗಿರಬೇಕು. ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಕ್ರೀಯಾಶೀಲ ಜಾಬ್ ಕಾರ್ಡ್ ಹೊಂದಿರಬೇಕು ಮತ್ತು ಅದೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುವರಾಗಿರಬೇಕು. 45 ವರ್ಷ ದೊಳಗಿನವರಾಗಿದ್ದು, ಕಳೆದ 3 ವರ್ಷಗಳ ಅವಧಿಯಲ್ಲಿ ಕನಿಷ್ಠ 2 ವರ್ಷ ಯೋಜನೆಯಡಿ ಅಕುಶಲ ಕಾರ್ಮಿಕರಾಗಿ ಕೆಲಸ ನಿರ್ವಹಿಸಿರÀಬೇಕು. ಮಾಸಿಕ ಗೌರವ ಧನ 6 ಸಾವಿರ ಹಾಗೂ ಕಾರ್ಯನಿರ್ವಹಣೆ ಆಧರಿಸಿ 5 ಸಾವಿರ ಪ್ರೋತ್ಸಾಹ ಧನವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಲ್ಲಾಪುರ(08419-261130), ಮುಂಡಗೋಡ(08301-22212), ಶಿರಸಿ(08384-22642)

RELATED ARTICLES  ಬಿ.ಎಸ್.ಎನ್.ಎಲ್ ನಿಂದ ಗ್ರಾಹಕರಿಗೆ ಭರ್ಜರಿ ಗಿಫ್ಟ! ಘೋಷಣೆಯಾಯ್ತು ರಾಖಿ ಯೋಜನೆ

ಹಳಿಯಾಳ(08284-220135), ಕಾರವಾರ(08382-22389) ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹು ಎಂದಿದ್ದಾರೆ.