ಶಿರಸಿ: ತಾಲೂಕಿನ ಬನವಾಸಿ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಆರೋಪಿತನನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ.

ಹಾನಗಲ್ಲಿನ ಶ್ರೀಧರ್ ಯಲ್ಲಪ್ಪ ಬಂಡಿವಡ್ಡರ್  ಬಂಧಿತ ಆರೋಪಿ. ಈತನಿಂದ ಭಾಂಶಿಯ ಶ್ರೀ ಕಾಳಿಕಾಂಬ ದೇವಸ್ಥಾನ ಹಾಗೂ ಬದನಗೋಡದ ಶ್ರೀ ಕಾನೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ 23000 ರೂಪಾಯಿ ಮೌಲ್ಯದ 4 ಗ್ರಾಂ ಬಂಗಾರದ ಆಭರಣ ವಶಕ್ಕೆ ಪಡೆಯಲಾಗಿದೆ.

RELATED ARTICLES  ಭರತನಾಟ್ಯ: ಪೃಥ್ವಿ ಹೆಗಡೆ ಜಿಲ್ಲೆಗೆ ಪ್ರಥಮ

ಸದರಿ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ್ ಎಸ್, ರವಿ ಡಿ ನಾಯ್ಕ, ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿರಸಿ ಉಪವಿಭಾಗ ಶಿರಸಿರವರ ಮಾರ್ಗದರ್ಶನದಲ್ಲಿ, ರಾಮಚಂದ್ರ ನಾಯಕ ಸಿಪಿಐ ಶಿರಸಿ ವೃತ್ತ, ಶಿರಸಿ ರವರ ನೇತೃತ್ವದಲ್ಲಿ ಹನಮಂತ ಬಿರಾದರ ಪಿಎಸ್‌ಐ, ಬಾಲಕೃಷ್ಣ ಬಿ ಪಾಲೇಕರ್ ಪಿಎಸ್‌ಐ, ಬನವಾಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಾಳದ ಸಂತೋಷ ತಳವಾರ, ಶಿವರಾಜ ಎಸ್, ಮಂಜುನಾಥ, ವಿನಾಯಕ ಎಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES  ಕುಡುಮ ಪುರವನ್ನು ಧರ್ಮಸ್ಥಳ ಮಾಡಿದ ಅಣ್ಣಪ್ಪ ಸ್ವಾಮಿಯಂತೆ ಬಾಡವನ್ನು ಶಕ್ತಿಸ್ಥಳ ವಾಗಿಸಿದ ಕಲಭದೇವ !