ಹೊನ್ನಾವರ: ಸಾಮಾಜಿಕ ಜಾಲತಾಣ ಎಲ್ಲೆಡೆ ಸದ್ದು ಮಾಡುತ್ತಿದ್ದರೆ, ಅದರಿಂದ ಆಗುವ ಅನುಕೂಲಗಳು ಹಾಗೂ ಕೆಲ ಸಮಯದಲ್ಲಿ ಅದರಿಂದಾಗುವ ಅಪಾಯಗಳು ಅಷ್ಟಿಷ್ಟಲ್ಲ ಎಂಬಂತಿದೆ.

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಲಿಂಡಾ ಎನ್ನುವ ವಿದೇಶಿ ಮಹಿಳೆಯಿಂದ  ಹೊನ್ನಾವರದ ಗುಣವಂತೆಯ ಶ್ರೀಪಾದ ಹೆಗಡೆ ಎನ್ನುವ ಯುವಕನೊಬ್ಬ 4.90 ಲಕ್ಷ ರೂ. ಕಳೆದುಕೊಂಡಿದ್ದು ಈ ಬಗ್ಗೆ ಆತ ಕಾರವಾರದ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪೋರ್ಚುಗಲ್ ದೇಶದ  ಮಹಿಳೆಯ ಜೊತೆಗೆ ಸ್ನೇಹ ಬೆಳೆಸಿಕೊಂಡು ನಂತರದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿದ್ದರು. ಮಹಿಳೆ ತಾನು ವಿದೇಶದಲ್ಲಿದ್ದು ಭಾರತ ದೇಶದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಣ ಹೂಡಿಕೆ ಮಾಡಬೇಕು ಹಾಗೂ ಭಾರತದಲ್ಲಿ ಒಬ್ಬರು ನಂಬಿಕೆ ಉಳ್ಳವರು ಬೇಕಾಗಿದ್ದಾರೆ, ನಿಮ್ಮ ಮೇಲೆ ತನಗೆ ನಂಬಿಕೆ ಎಂದು ಮಹಿಳೆ ಶ್ರೀಪಾದ ಹೆಗಡೆಗೆ ನಂಬಿಸಿದ್ದಾಳೆ.

RELATED ARTICLES  ದೇಶೋನ್ನತಿಯ ಕನಸು ಕಟ್ಟಲು ಬನ್ನಿ:ಎನ್.ಆರ್.ಗಜು

ಆದ್ದರಿಂದ ನಾನು ಭಾರತ ದೇಶಕ್ಕೆ ಬಂದ ಮೇಲೆ ಹಣ ಹೂಡಿಕೆಯ ಬಗ್ಗೆ ವಿವರವಾಗಿ ಮಾಹಿತಿ ನೀಡುತ್ತೇನೆ. ಈ ನನ್ನ ಪ್ರತಿನಿಧಿ ನಮ್ಮ ದೇಶದಿಂದ ವಿಲಿಯಂ ಜೆ. ಮಿಲ್ಸ್ ಎನ್ನುವ ವ್ಯಕ್ತಿಯು ಭಾರತಕ್ಕೆ ಬರುತ್ತಿದ್ದು ಅವರ ಜೊತೆ ನಾನು ಉಡುಗೋರೆಯಾಗಿ ಬಟ್ಟೆ ಶೂ, ವಾಚ್, ಮೊಬೈಲ್ ಹಾಗೂ ಎರಡು ಲಕ್ಷ ಡಾಲರ್ ಕಳುಹಿಸಿಕೊಡುವುದಾಗಿ ನಂಬಿಸಿದ್ದಾಳೆ. ಬಳಿಕ ಜೂ.10ರಂದು ವಿಲಿಯಂ ಜೆ. ಮಿಲ್ಸ್,  ಶ್ರೀಪಾದ ಹೆಗಡೆ ಅವರಿಗೆ ಸಂಪರ್ಕಿಸಿ ಲಿಂಡಾ ಅವರ ಪ್ರತಿನಿಧಿಯಾಗಿದ್ದು ಭಾರತಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ.

RELATED ARTICLES  ಫೆ. 9 ರಂದು ಬನವಾಸಿಯಲ್ಲಿ ಸಾಂಸ್ಕøತಿಕ ನಡಿಗೆ : ಸಾಹಿತಿ-ಕಲಾವಿದರು ಪಾಲ್ಗೊಳ್ಳಲು ಕರ್ಕಿಕೋಡಿ ಮನವಿ

ವಿಮಾನಯಾನದ ವೆಚ್ಚ, ಕೋವಿಡ್ ಸರ್ಟಿಫಿಕೆಟ್ ಖರ್ಚು, ಏರ್ ಪೋರ್ಟ್ ಪಾರ್ಸಲ್ ವೆಚ್ಚ ಪಾರ್ಸಲ್ ತೆಗೆದುಕೊಳ್ಳಲು ಹಾಗೂ  ಅಲ್ಲಿನ ತನಿಖಾಧಿಕಾರಿಗಳಿಗೆ ನೀಡಬೇಕಾದ ಹಣ, ಪೊಲೀಸ್ ವೆರಿಫಿಕೇಶನ್ ಸ್ಟ್ಯಾಂಪ್ ಡ್ಯೂಟಿ ಚಾರ್ಜ್ ತುಂಬುವಂತೆ ವಿಲಿಯಂ, ಶ್ರೀಪಾದ ಹೆಗಡೆಗೆ ತಿಳಿಸಿದ್ದಾರೆ. ಇದನ್ನು ನಂಬಿದ ಶ್ರೀಪಾದ ಹೆಗಡೆ ವಿಲಿಯಂ ಮಾತು ನಂಬಿ ನೀಡಿದ ವಿವಿಧ ಖಾತೆಗೆ ಜೂ.10ರಿಂದ 26ರವರೆಗೆ ಒಟ್ಟೂ 4,90,350 ರೂ. ವರ್ಗಾವಣೆ ಮಾಡಿದ್ದಾರೆ. ಆದರೂ ಯಾವುದೇ ಪಾರ್ಸೆಲ್ ಬಂದಿಲ್ಲ. ಇದರಿಂದ ತನಗೆ ಮೋಸವಾಗಿದೆ ಎಂದು ಬುಧವಾರ ಕಾರವಾರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಶ್ರೀಪಾದ ಹೆಗಡೆ ದೂರು ದಾಖಲಿಸಿದ್ದಾರೆ.

ಈ ರೀತಿಯ ಕಾರ್ಯಕ್ಕೆ ಇಳಿಯುವ ಮುನ್ನ ಜನತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.