ಕುಮಟಾ : ಇಂದು ರಂದು ಕೋವಿಡ್ ಸಾಂಕ್ರಾಮಿಕ ರೋಗದ ಸಂದಿಗ್ಧ ಸಮಯದಲ್ಲಿ ಇಲಾಖೆ ಆದೇಶದಂತೆ ಪಾಲಕರ ಸಮ್ಮುಖದಲ್ಲಿ ಶಾಲಾ ಪ್ರಾರಂಭೋತ್ಸವ ವನ್ನು ಆಚರಿಸಲಾಯಿತು ನಿಯಮಗಳ ಅನುಸಾರ ವಿದ್ಯಾರ್ಥಿಗಳ ಬೌದ್ಧಿಕ ಅನುಪಸ್ಥಿತಿಯಲ್ಲಿ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಇರುವ ಮಾರ್ಗೋಪಾಯಗಳ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು ಸಹಶಿಕ್ಷಕರು ಎಸ್ಡಿಎಂಸಿ ಸದಸ್ಯರುಗಳು ಮತ್ತು ಪಾಲಕರ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಶಾಲಾ ಮುಖ್ಯ ಶಿಕ್ಷಕರು ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣಕ್ಕಾಗಿ ಹಾಗೂ ಇಲಾಖೆಯಡಿ ಕೈಗೊಳ್ಳುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

RELATED ARTICLES  ಮಳೆಗಾಲ ಪ್ರಾರಂಭಕ್ಕೆ ವಿದ್ಯುತ್ ವ್ಯತ್ಯಯ : ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಪರದಾಟ

ಪಾಲಕರು ಮನೆಯಲ್ಲಿ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕಾಗಿ ಮಾಡಬೇಕಾದ ಕಾರ್ಯಗಳ ಬಗ್ಗೆ ವಿವರಿಸಿ ಸಹಕಾರ ಕೋರಿದರು. ಆನ್ಲೈನ್ ಶಿಕ್ಷಣಕ್ಕೆ ಒಳಪಡುವ ವಿದ್ಯಾರ್ಥಿಗಳೊಂದಿಗೆ, ಸ್ಮಾರ್ಟ್ಫೋನ್ ಇಲ್ಲದ ಮಕ್ಕಳಿಗೆ ನಿರಂತರವಾಗಿ ಪಾಠಗಳನ್ನು ಮಾಧ್ಯಮಗಳ ಮೂಲಕ ಕಳಿಸುವ ಬಗ್ಗೆ ಚರ್ಚಿಸಲಾಯಿತು. ಶಿಕ್ಷಕರು ನಿರಂತರವಾಗಿ ಪಾಲಕರ ಸಂಪರ್ಕದಲ್ಲಿ ಇರಬೇಕಾದ ಅತ್ಯಗತ್ಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಹಾಗೆಯೇ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವ ಸಲುವಾಗಿ ಎಲ್ಲರನ್ನೂ ಒಳಗೊಂಡು ಪಟ್ಟಣದ ಬೀದಿಯಲ್ಲಿ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಹೊಸದಾಗಿ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಅವರ ಪಾಲಕರ ಮುಖಾಂತರ ವಿತರಿಸಲಾಯಿತು.

RELATED ARTICLES  ಪ್ರತಿಭಾ ಪುರಸ್ಕಾರ ಸಮಾರಂಭ ನಾಳೆ.