ಭಟ್ಕಳ: ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಭಾಷಾ ಸಂಘದ ಸಹಯೋಗದಲ್ಲಿ ಪ್ರಶಿಕ್ಷಣಾರ್ಥಿಗಳಿಗಾಗಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕುರಿತು ಭಾಷಣ ಸ್ಪರ್ಧೆ ನಡೆಯಿತು.

IMG 20170904 WA0018

ಭಾಷಣ ಸ್ಪರ್ಧೆಯಲ್ಲಿ ಜಗದೀಶ್ ನಾಯ್ಕ ಪ್ರಥಮ, ನ್ಯಾನ್ಸಿ ಥೋಮಸ್ ಹಾಗೂ ಪ್ರೀತಿ ನಾಯ್ಕ ದ್ವಿತೀಯ, ಸ್ವಾತಿ ಮೇಸ್ತ ತೃತೀಯ ಸ್ಥಾನ ಪಡೆದರು. ಪ್ರಶಿಕ್ಷಣಾರ್ಥಿ ಕವಿತಾ ನಾಯ್ಕ, ಅಭಿತಾ ಇವರಿಗೆ ಪ್ರೋತ್ಸಾಹಕ ಸ್ಥಾನ ಪಡೆದುಕೊಂಡರು. ಸ್ಪರ್ಧಾ ಕಾರ್ಯಕ್ರಮದ ನಿರ್ಣಾಯಕರಾಗಿ ಕಾಲೇಜಿನ ವಾಚನಾಲಯದ ವ್ಯವಸ್ಥಾಪಕಿ ಶ್ರೀಮತಿ ರಶ್ಮಿ ನಾಯ್ಕ ಹಾಗೂ ಉಪನ್ಯಾಸಕಿ ರಶ್ಮಿ ಎ.ಆರ್. ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.

RELATED ARTICLES  43 ಲಕ್ಷ ರೂ. ವಂಚಿಸಿದ ಆರೋಪಿ ಪೊಲೀಸ್ ಬಲೆಗೆ.

 

ಕಾಲೇಜಿನ ಪ್ರಾಚಾರ್ಯ ಡಾ.ಆರ್.ನರಸಿಂಹ ಮೂರ್ತಿ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಿ ಪ್ರಶಿಕ್ಷಣಾರ್ಥಿಗಳ ನ್ನು ಅಭಿನಂದಿಸಿದರಲ್ಲದೇ ಭಾಷಣ ಸ್ಪರ್ಧೆಯಲ್ಲಿ ಪರಿಣಾಮಕಾರಿ ವಿಷಯ ಪ್ರಸ್ತುತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಭಾಷಾಸಂಘದ ಕಾರ್ಯಾಧ್ಯಕ್ಷ ಗಂಗಾಧರ ನಾಯ್ಕ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ ಕೊನೆಯಲ್ಲಿ ಎಲ್ಲರನ್ನು ವಂದಿಸಿದರು.ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES  ಡಿ ಐ ಡಿ ಖ್ಯಾತಿಯ ಸಂಕೇತ್ ಗಾಂವಕರ್ ಗೆ ರಾಷ್ಟ್ರಧ್ವಜ ನೀಡಿ ಗೌರವಿಸಿದ ರೂಪಾಲಿ ನಾಯ್ಕ.