ಹೊನ್ನಾವರ : ತಾಲೂಕಿನ ಕರ್ಕಿಯ ತೊಪ್ಪಲಕೇರಿ ನಿವಾಸಿ ಕೃಷ್ಣ ಜಟ್ಟಿ ಪಟಗಾರ ಇವರು ದಿನಾಂಕ 02-05-2021 ರಂದು ತಮ್ಮ ಮನೆಯಲ್ಲಿದ್ದ ಚಿನ್ನದ ನಕ್ಲೇಸ್ ಹಾಗೂ 10 ಸಾವಿರ ರೂಪಾಯಿ ಕಳ್ಳತನವಾಗಿದ್ದು ಪತ್ತೆ ಮಾಡಿಕೊಡಲು ಕೋರಿ ದಿನಾಂಕ 29-06-2021 ರಂದು ಹೊನ್ನಾವರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣ ದಾಖಲಾದ ಒಂದೇ ದಿನದೊಳಗೆ ಆರೋಪಿತನಾದ ಸಚಿನ್ ವಿರುಪಾಕ್ಷಪ್ಪ ರಾಮಾಪುರ ಎಂಬುವವರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದು ಆರೋಪಿತನಿಂದ 18 ಗ್ರಾಂ ತೂಕದ ಅಂದಾಜು 82 ಸಾವಿರ ರೂಪಾಯಿ ಮೌಲ್ಯದ ಚಿನ್ನದ ನಕ್ಲೇಸ್ ನ್ನು ಜಪ್ತುಪಡಿಸಿಕೊಂಡು ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜಿಲ್ಲಾ ಕಾರಾಗೃಹ ಕಾರವಾರದಲ್ಲಿ ನ್ಯಾಯಾಂಗ ಬಂಧನಕ್ಕೆಒಪ್ಪಿಸಲಾಗಿರುತ್ತದೆ.
ಶ್ರೀ ಬೆಳ್ಳಿಯಪ್ಪ ಕೆ.ಯು ಪೊಲೀಸ್ ಉಪಾಧೀಕ್ಷಕರು ಭಟ್ಕಳ ಉಪ ವಿಭಾಗ ಭಟ್ಕಳ ಇವರ ಮಾರ್ಗದರ್ಶನದಲ್ಲಿ ಶ್ರೀ ಶ್ರೀಧರ್ ಎಸ್.ಆರ್ ಸಿ.ಪಿ.ಐ ಹೊನ್ನಾವರ ವೃತ್ತ ಇವರ ನೇತೃತ್ವದಲ್ಲಿ ಹೊನ್ನಾವರ ಠಾಣೆಯ ಪಿ.ಎಸ್.ಐ ರವರಾದ ಶ್ರೀಮತಿ ಸಾವಿತ್ರಿ ನಾಯಕ ಪಿ.ಎಸ್.ಐ ಕ್ರೈಂ, ಶ್ರೀ ಶಶಿಕುಮಾರ ಪಿ.ಎಸ್.ಐ ಕಾ&ಸು-1, ಶ್ರೀ ಮಹಾಂತೇಶ ನಾಯಕ ಪಿ.ಎಸ್.ಐ ಕಾ&ಸು -2, ಶ್ರೀ ಶಾಂತಿನಾಥ್ ಪ್ರೊ.ಪಿ.ಎಸ್.ಐ ಹಾಗೂ ಪೊಲೀಸ್ ಸಿಬ್ಬಂದಿಯವರಾದ ಶ್ರೀ ರಮೇಶ ಲಮಾಣಿ ಸಿ.ಎಚ್.ಸಿ, ಶ್ರೀ ಕೃಷ್ಣ ಗೌಡ ಸಿ.ಎಚ್.ಸಿ, ಶ್ರೀ ಮಹಾವೀರ ಸಿ.ಪಿ.ಸಿ, ಶ್ರೀ ರಯೀಸ್ ಭಗವಾನ್ ಸಿಪಿಸಿ ಇವರು ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದು, ಇವರ ಪತ್ತೆ ಕಾರ್ಯವನ್ನು ಪ್ರಶಂಸಿಸಲಾಗಿದೆ.