ಕುಮಟಾ : ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ತಾಲೂಕಿನ ಮಿರ್ಜಾನ್ ಸಮೀಪ ನಡೆದಿದೆ.
ಇಂದು ಮಧ್ಯಾಹ್ನದ ಸಮಯದಲ್ಲಿ ಅತಿ ವೇಗದಿಂದ ಬಂದ ಟ್ಯಾಂಕರ್ ಬೈಕ್ ಸವಾರಿನಿಗೆ ಗುದ್ದಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಕಿಮಾನಿ ಮೂಲದ ರಮೇಶ ಹರಿಕಂತ್ರ ಎಂದು ಗುರುತಿಸಲಾಗಿದೆ. ಅತಿ ವೇಗದಿಂದ ಬಂದ ಲಾರಿ ಬೈಕ್ ಸವಾರಿನಿಗೆ ಗುದ್ದಿದ್ದು ,ಬೈಕ್ ಸಮೇತ 6 ಕಿ ಮೀ ಕ್ರಮಿಸಿದ್ದು ತಂಡ್ರಕುಳಿ ಸಮೀಪ ಬೈಕ್ ರಸ್ತೆಯ ಮಧ್ಯ ಬಿದ್ದಿದೆ. ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕುಮಟಾ ಪೋಲೀಸರು ಲಾರಿಯನ್ನು ಅಂತ್ರವಳ್ಳಿ ಸಮೀಪ ತಡೆ ಹಿಡಿದಿದ್ದು ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ. ಲಾರಿ ತಮಿಳುನಾಡು ಮೂಲದ್ದಾಗಿದ್ದು TN 52 A 9911 ವಾಹನದ ನೊಂದಣಿಯಾಗಿದೆ.
ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಗೊಂದಲ ಉಂಟಾಗಿದ್ದು ಪೊಲೀಸರು ಪ್ರಾಥಮಿಕ ಕಾರ್ಯ ಕೈಗೊಂಡಿದ್ದಾರೆ.