ಹೊನ್ನಾವರ : ಕಾಂಗ್ರೇಸ್ ಪಕ್ಷ ಕೋವಿಡ್-೧೯ ರಿಲೀಫ್ ಟಾಸ್ಕ್ ಪೋರ್ಸ ಜೊತೆ ಸಮಾಲೋಚನೆ ನಡೆಸಿ ರಾಷ್ಟಾçಧ್ಯಂತ ಜನರನ್ನು ತಲಪುವ ಅಭಿಯಾನವನ್ನು ರೂಪಿಸಿದೆ. ಈ ಅಭಿಯಾನದಂತೆ ಪಂಚಾಯತ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆಗಳಿಗೆ ತೆರಳಿ ಕೋವಿಡ್‌ನಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳ ಬಗ್ಗೆ ಮಾಹಿತಿ ಕಲೆ ಹಾಕುವ ಗುರಿ ಹೊಂದಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತಿಳಿಸಿದರು. ಅವರು ಇಂದು ಹೊನ್ನಾವರ ಪಟ್ಟಣದ ಗಾಂಧಿ ನಗರದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ “ಕೋವಿಡ್-೧೯ ಸಹಾಯ ಹಸ್ತ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೆ.ಪಿ.ಸಿ.ಸಿ. ನಿರ್ದೇಶನದಂತೆ ಮುಂದಿನ ಮೂವತ್ತು ದಿನಗಳ ಕಾಲ ಪ್ರತಿ ಪಟ್ಟಣ ಮತ್ತು ಗ್ರಾಮಪಂಚಾಯತ ಮಟ್ಟದಲ್ಲಿ “ಕೋವಿಡ್-೧೯ ಸಹಾಯ ಹಸ್ತ” ಅಭಿಯಾನ ನಡೆಯಲಿದ್ದು, ಈ ಕುರಿತಂತೆ ಬ್ಲಾಕ್ ಮಟ್ಟದಲ್ಲಿ ೧೦ ಮುಖಂಡರ ತಂಡವನ್ನೊಳಗೊAಡ ವಾರಿಯರ್ಸ ಗ್ರೂಪ್ ರಚಿಸಲಾಗಿದೆ ಎಂದರು. ಪ್ರತಿ ದಿನ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಬರುವ ೧೫ ಮನೆಗಳಿಗೆ ವಾರಿಯರ್ಸಗಳು ಭೇಟಿ ನೀಡಿ ಕೆ.ಪಿ.ಸಿ.ಸಿ. ನಿಗದಿ ಪಡಿಸಿದ “ಸಹಾಯಹಸ್ತ ನಮೂನೆ”ಯಲ್ಲಿ ಮಾಹಿತಿ ಸಂಗ್ರಹಿಸಿ ಕೆ.ಪಿ.ಸಿ.ಸಿ. ಟಾಸ್ಕ್ ಪೋರ್ಸಗೆ ರವಾನಿಸಿ ತೊಂದರೆಗೊಳಗಾದ ಸಂತ್ರಸ್ತರಿಗೆ ನೆರವು ನೀಡಲಾಗುವುದು ಎಂದು ಬಿ.ಸಿ.ಸಿ. ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತಿಳಿಸಿದರು. ಪ್ರತಿ ಪಂಚಾಯತ ಘಟಕಗಳ ಅಧ್ಯಕ್ಷರೇ “ಹೆಲ್ತ್ ವಾರಿರ‍್ಸ್” ಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಉಸ್ತುವಾರಿಗಳಾಗಿ ಪಕ್ಷದ ಮುಖಂಡರಾದ ಶಿವಾನಂದ ಹೆಗಡೆ ಕಡತೋಕಾ, ವಿನೋದ ನಾಯ್ಕ, ಕರ್ಕಿ, ದಾಮೋದರ ನಾಯ್ಕ ಹಳದೀಪುರ, ಸುರೇಶ ಪಟಗಾರ ನವೀಲಗೋಣ, ಕೆ.ಎಚ್. ಗೌಡ ಚಂದಾವರ, ಮಂಜುನಾಥ ಭಟ್ಟ ಕಡ್ಲೆ, ಗಜಾನನ ನಾಯ್ಕ, ಸಾಲ್ಕೋಡ, ಸಂದೇಶ ಶೆಟ್ಟಿ, ಹೊಸಾಕುಳಿ, ರವಿ ಶೆಟ್ಟಿ ಕವಲಕ್ಕಿ, ಸುಭಾಷ ಮೇಸ್ತ, ಹೊನ್ನಾವರ ಇವರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ ಮಾತನಾಡಿದರು. ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ ವಂದಿಸಿದರು. ಸಭೆಯಲ್ಲಿ ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಬಾಲಚಂದ್ರ ನಾಯ್ಕ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿಕ್ರಿಯಾ ಶೇಖ್, ಹಿ. ವರ್ಗ ವಿಭಾಗದ ಕಾರ್ಯದರ್ಶಿ ಗಜು ನಾಯ್ಕ, ಮಂಜು ಖಾರ್ವಿ, ಕೃಷ್ಣ ಹರಿಜನ, ಕೃಷ್ಣ ಮಾರಿಮನೆ, ಕಾರ್ತಿಕ ಬಿ., ಹನೀಫ್ ಶೇಖ್, ಜೊಸೇಫ್ ಡಿಸೋಜಾ, ಮಹೇಶ ನಾಯ್ಕ, ನೆಲ್ಸನ್ ರೊಡ್ರಿಗೀಸ್, ಉದಯ ಮೇಸ್ತ, ಇನ್ನು ಮುಂತಾದವರು ಉಪಸ್ಥಿತರಿದ್ದರು.
ಸಭೆಯ ನಂತರ ಗಾಂಧಿನಗರದ ಶ್ರೀಮತಿ ಬದ್ರುನಿಸ್, ಪರಮೇಶ್ವರ ಮೇಸ್ತ, ಕೊನ್ಸೆಪ್ಟಾ ಡಾಯಸ್, ಅಂತೋನಿ ಲುದ್ರಿಂಗ್, ಇನ್ನು ಹಲವಾರು ಮನೆಗಳಿಗೆ ತೇರಳಿ ಕೋವಿಡ್‌ನಿಂದ ಆದ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಲಾಯಿತು.