ಕುಮಟಾ : ಬಿ.ಜೆ.ಪಿ ಸಂಸ್ಥಾಪಕರಾದ ಶ್ರೀ ಶ್ಯಾಮಪ್ರಸಾದ ಮುಖರ್ಜಿಯವರ ಬಲಿದಾನದ ಸ್ಮರಣಾರ್ಥ ಹಮ್ಮಿಕೊಂಡ ವೃಕ್ಷಾರೋಪಣ ಕಾರ್ಯಕ್ರಮ ಉತ್ತರಕನ್ನಡದ ಸಂಯೋಜಕರಾದ ನಾಗರಾಜ ನಾಯಕ ತೊರ್ಕೆ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.

ಕಾರವಾರ, ಅಂಕೋಲಾ, ಶಿರಸಿ, ಹೊನ್ನಾವರ, ಭಟ್ಕಳ ಹಾಗೂ ಸಿದ್ದಾಪುರ, ಮುಂಡಗೋಡಿನಲ್ಲಿ ಯಶಸ್ವಿಯಾಗಿ ನಡೆದಿದ್ದಯ ಕುಮಟಾದ ಹೆಗಡೆಯಲ್ಲಿಯೂ ನಡೆಯಿತು. ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀ ದಿನಕರ ಶೆಟ್ಟಿ, ಕುಮಟಾ ಮಂಡಲ ಅಧ್ಯಕ್ಷರಾದ ಶ್ರೀ ಹೇಮಂತ ಗಾಂವಕರ, ಜಿಲ್ಲಾ ವೃಕ್ಷಾರೋಪಣ ಸಂಚಾಲಕರಾದ ಶ್ರೀ ನಾಗರಾಜ ನಾಯಕ ತೊರ್ಕೆ, ಹಿರಿಯ ಮುಖಂಡರಾದ ಶ್ರೀ ವಿನೋದ ಪ್ರಭು, ಡಾ. ಶ್ರೀ ಜಿ.ಜಿ.ಹೆಗಡೆ, ಶ್ರೀ ಎಮ್.ಜಿ.ನಾಯ್ಕ, ಶ್ರೀ ಪ್ರಶಾಂತ ನಾಯ್ಕ, ಶ್ರೀ ಜಿ.ಎಸ್.ಗುನಗಾ, ಶ್ರೀ ವಿಶ್ವನಾಥ ನಾಯ್ಕ, ಕುಮಟಾ ಮಂಡಲ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಕುಮಾರ ಮಾರ್ಕಂಡೇಯ, ಹೊಲನದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಮತ್ತು ಹೆಗಡೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಕ್ಷದ ಕಾರ್ಯಕರ್ತರು, ಊರ ನಿವಾಸಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥ ಪೂರ್ಣಗೊಳಿಸಿದರು.

ಅಂಕೋಲಾದಲ್ಲಿ ನಡೆದ ವೃಕ್ಷಾರೋಪಣ ಕಾರ್ಯಕ್ರಮ

ಬಿ.ಜೆ.ಪಿ ಸಂಸ್ಥಾಪಕರಾದ ಶ್ರೀ ಶ್ಯಾಮಪ್ರಸಾದ ಮುಖರ್ಜಿಯವರ ಬಲಿದಾನದ ಸ್ಮರಣಾರ್ಥ ಹಮ್ಮಿಕೊಂಡ ವೃಕ್ಷಾರೋಪಣ ಕಾರ್ಯಕ್ರಮ ನಿನ್ನೆ ಅಂಕೋಲಾದಲ್ಲಿ ನಡೆಯಿತು.
ಕಾರವಾರ-ಅಂಕೋಲಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಾಂತಾರಾಮ ಸಿದ್ಧಿಯವರು ಕಾರ್ಯಕ್ರಮ ಉದ್ಘಾಟಿಸಿ ತಾಲೂಕಿನ ವಿವಿಧ ಕಡೆ ಗಿಡಗಳನ್ನು‌ ನೆಟ್ಟು ,ನೆಟ್ಟ ಗಿಡಗಳು ಬದುಕುಳಿಯುವಂತೆ ನಾವೆಲ್ಲ ಕಾಳಜಿ‌ ವಹಿಸಬೇಕೆಂದು ಸಲಹೆ ನೀಡಿದರು.

RELATED ARTICLES  ಬಿರುಸಿನ ಪ್ರಚಾರ ನಡೆಸಿದ ಸೂರಜ್ ನಾಯ್ಕ ಸೋನಿ.

ಈ ಸಂದರ್ಭದಲ್ಲಿ ಭಾಜಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರು ಎಸಳೆ,ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಪ್ರಶಾಂತ ನಾಯ್ಕ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಮಹಾಂತೇಶ, ವೃಕ್ಷಾರೋಪಣ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ಶ್ರೀ‌ ನಾಗರಾಜ ನಾಯ್ಕ ತೊರ್ಕೆ, ಅಂಕೋಲಾ ಮಂಡಲ ಅದ್ಯಕ್ಷರಾದ ಶ್ರೀ ಸಂಜಯ ನಾಯ್ಕ, ಪಕ್ಷದ ಪ್ರಮುಖರಾದ ಶ್ರೀ ರಾಜೇಂದ್ರ ನಾಯ್ಕ,ಶ್ರೀ ಜಗಧೀಶ ನಾಯಕ ಮೊಗಟಾ ,ಶ್ರೀ ಭಾಸ್ಕರ ನಾರ್ವೆಕರ,ಪಂಚಾಯತ್ ಸದಸ್ಯರುಗಳು, ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಯಲ್ಲಾಪುರ ‌ಮಂಡಳದ ತುಡಗುಣಿ ಮತ್ತು ಉಮ್ಮಚ್ಛಗಿ ಶಕ್ತಿ ಕೇಂದ್ರದ ವತಿಯಿಂದ ವೃಕ್ಷಾರೋಪಣ

ಪಕ್ಷದ ಸೂಚನೆಯ ಮೇರೆಗೆ ಶ್ರೀ ಶ್ಯಾಮಪ್ರಸಾದ ಮುಖರ್ಜಿಯವರ ಸಂಸ್ಮರಣೆಗಾಗಿ ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ‌ಮಂಡಳ ತುಡಗುಣಿ ಮತ್ತು ಉಮ್ಮಚ್ಛಗಿ ಶಕ್ತಿ ಕೇಂದ್ರದಲ್ಲಿ ವೃಕ್ಷಾರೋಪಣ ಕಾರ್ಯಕ್ರಮವನ್ನು ಸಂಯೋಜಿಸಲಾಗಿತ್ತು..
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರು ಎಸಳೆ, ವೃಕ್ಷಾರೋಪಣ ಜಿಲ್ಲಾ ಸಂಚಾಲಕ ಶ್ರೀ ನಾಗರಾಜ ನಾಯಕ ತೊರ್ಕೆ, ಜಿಲ್ಲಾ ಹಿಂದುಳಿದ ಮೋರ್ಚಾ ಪ್ರಧಾನಕಾರ್ಯದರ್ಶಿ ಶ್ರೀ ಮಹಂತೇಶ ಹಾದಿಮನೆ ತಾಲ್ಲೂಕಿನ ಅಧ್ಯಕ್ಷರಾದ ಶ್ರೀ ಜಿ.ಎನ್.ಗಾಂವ್ಕರ, ಪ್ರಧಾನಕಾರ್ಯದರ್ಶಿಗಳಾದ ಶ್ರೀ ಪ್ರಸಾದ ಹೆಗಡೆ, ಶ್ರೀ ರವಿಭಟ್ಟ,ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಶ್ರೀ ಸೋಮೇಶ್ವರನಾಯ್ಕ,ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಪ್ರದೀಪ್ ಯಲ್ಲಾಪುರಕರ ಮತ್ತು ತುಡಗುಣಿ-ಉಮ್ಮಚ್ಛಗಿ ಶಕ್ತಿ ಕೇಂದ್ರ ವತಿಯಿಂದ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸರಸ್ವತಿ ಪಟಗಾರ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಗಣೇಶ ಹೆಗಡೆ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಶಿವರಾಜ ಪೂಜಾರಿ, ಮಹಿಳಾ ಜಿಲ್ಲಾ ಪ್ರಧಾನಕಾರ್ಯದರ್ಶಿ ರಾಧಾ ಹೆಗಡೆ,ಜಿಲ್ಲಾ ಯುವಮೋರ್ಚಾ ಸದಸ್ಯ ಶ್ರೀ ರಘುಪತಿ ಭಟ್ಟ ಶ್ರೀಪಾದ ಸಂಕಂದಗುಂಡಿ, ವಿ.ಎಮ್.ಹೆಗಡೆ,ಸೂರಿಮನೆ ರಾಮಣ್ಣ, ಎಮ್.ಅರ್.ಹೆಗಡೆ ತಾರೇಹಳ್ಳಿ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.

RELATED ARTICLES  ಫೇ 9 ಕ್ಕೆ ಡಾ. ಜಿ.ಎಲ್. ಹೆಗಡೆಯವರಿಗೆ "ಅಭಿನಂದನಾ ಕಾರ್ಯಕ್ರಮ"

ಕಾರವಾರದಲ್ಲಿ ವೃಕ್ಷಾರೋಪಣ

ಬಿ.ಜೆ.ಪಿ ಸಂಸ್ಥಾಪಕರಾದ ಶ್ರೀ ಶ್ಯಾಮಪ್ರಸಾದ ಮುಖರ್ಜಿಯವರ ಬಲಿದಾನದ ಸ್ಮರಣಾರ್ಥ ಹಮ್ಮಿಕೊಂಡ ವೃಕ್ಷಾರೋಪಣ ಕಾರ್ಯಕ್ರಮ ನಿನ್ನೆ ಕಾರವಾರದಲ್ಲಿ ಮಹಿಳಾ ಮೋರ್ಚಾವತಿಯಿಂದ ನೆರವೇರಿತು.

ಈ ಸಂದರ್ಭದಲ್ಲಿ ಕಾರವಾರ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಶ್ರೀಮತಿ ರೇಖಾ ಹೆಗಡೆ, ಕಾರವಾರ ಮಂಡಲ ಅಧ್ಯಕ್ಷರಾದಂತ ಶ್ರೀ ನಾಗೇಶ್ ಕುರ್ಡೇಕರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಪ್ರಶಾಂತ ನಾಯ್ಕ, ನಗರ ಸಭೆ ಅಧ್ಯಕ್ಷರಾದ ಶ್ರೀ ನಿತೀನ್ ಪಿಕಳೆ, ಶ್ರೀ ರೋಷನ್‌ ರೇವಣಕರ್,ಅಂಕೋಲಾ ಮಂಡಲ ಅಧ್ಯಕ್ಷರಾದ ಶ್ರೀ ಸಂಜಯ ನಾಯ್ಕ, ಶ್ರೀ ಜಗಧೀಶ ನಾಯಕ ಮೊಗಟಾ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸಿದರು.