ಭಟ್ಕಳ : ಗೋವುಗಳ ಅಕ್ರಮ ಸಾಗಾಟ ಜಾಲ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು ಪದೇ ಪದೇ ಪೊಲೀಸರು ಕಾರ್ಯಾಚರಣೆ ನಡೆಸಿ ಗೋ ಅಕ್ರಮ ಸಾಗಾಟದಲ್ಲಿ ಭಾಗವಹಿಸುವವರನ್ನು ಹೆಡೆಮುರಿ ಕಟ್ಟುತ್ತಿದ್ದಾರೆ.

ಹಿಂಸಾತ್ಮಕವಾಗಿ 9 ಎತ್ತುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಭಾನುವಾರ ಇಲ್ಲಿನ ಬಂದರ ರೋಡ 6ನೇ ಕ್ರಾಸ್ ಸಮೀಪ ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

RELATED ARTICLES  ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಕುರಿತು .

ಕಾರ್ಯಾಚರಣೆಯಲ್ಲಿ ಆರೋಪಿ ಪರಾರಿಯಾಗಿದ್ದು ಆರೋಪಿಗಳನ್ನಾಗಿ ಮೋಹಿದ್ದೀನ್ ಪಾತೀಮಿ,ಹನೀಫ್ ಹಾಗೂ ವಾಹನದ ಚಾಲಕ ಎಂದು ಗುರುತಿಸಲಾಗಿದೆ.

ಇವರು ಇಚರ್ ವಾಹನದಲ್ಲಿ ವದೆ ಮಾಡುವ ಉದ್ದೇಶದಿಂದ 6 ಲಕ್ಷಕ್ಕೂ ಅಧಿಕ ಮೌಲ್ಯದ 9 ಬ್ರಹತ್ ಆಕಾರದ ಎತ್ತುಗಳನ್ನು ಪಾಸ್ ಪರವಾನಿಗೆ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡಿಕೊಂಡು ಹೋಗುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಭಟ್ಕಳ ನಗರ ಠಾಣೆ ಪೊಲೀಸರು ಬಂದರ ರೋಡ 6 ನೇ ಕ್ರಾಸ್ ಸಮೀಪ ಮುಗ್ದುಮ್ ಕಾಲೊನಿಯಲ್ಲಿ ದಾಳಿ ಮಾಡಿ ವಾಹನ ಸಮೇತ 9 ಎತ್ತುಗಳನ್ನು ರಕ್ಷಣೆ ಮಾಡಿದ್ದಾರೆ .

RELATED ARTICLES  ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ ಪಠ್ಯಪೂರಕ ಚಟುವಟಿಕೆಗಳು ಅಗತ್ಯ: ರೋಹಿದಾಸ್.ಎಸ್.ಗಾಂವಕರ್

ಈ ಕುರಿತು ಭಟ್ಕಳ ನಗರ ಠಾಣೆಯ ಪಿ.ಎಚ್.ಐ ಎಚ್.ಪಿ ಕುಡಗುಂಟಿ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿ.ಎಸೈ ಎಚ್.ಪಿಈ ಕುಡುಗುಂಟಿ, ಗ್ರಾಮೀಣ ಠಾಣೆ ಪಿ.ಎಸೈ ಭರತ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.