ಗೋಕರ್ಣ-ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಫೌಂಡೇಶನ್ ವತಿಯಿಂದ ಜುಲೈ 8 ರಂದು (ಗುರುವಾರ) ಗೋಕರ್ಣದ ಆಡುಕಟ್ಟೆ ( ಮಾರುಕಟ್ಟೆ ಪಕ್ಕದಲ್ಲಿರುವ) ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 18 ರಿಂದ 44 ವಯೋಮಾನದೊಳಗಿನ ವ್ಯಕ್ತಿಗಳಿಗೆ ಉಚಿತ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೆನರಾ ಹೆಲ್ತ್ ಕೇರ್ ಸೆಂಟರ್ ಸಹಯೋಗದಲ್ಲಿ ನಡೆಯುತ್ತಿರುವ ಈ ಅಭಿಯಾನವನ್ನ ಗುರುವಾರ ಬೆಳಿಗ್ಗೆ 11 ಗಂಟೆಗೆ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೆನರಾ ಹೆಲ್ತ್ ಕೇರ್ ಸೆಂಟರ್ ಮುಖ್ಯಸ್ಥ ಡಾ.ಜಿ.ಜಿ.ಹೆಗಡೆ ಅವರ ವಿಶೇಷ ಉಪಸ್ಥಿತಿ ಇರಲಿದೆ. ಗೊಕರ್ಣ ಪಟ್ಟಣವೊಂದರಲ್ಲೇ ಒಂದು ಸಾವಿರ ಲಸಿಕೆಯನ್ನ ನೀಡುವ ಗುರಿಯನ್ನ ಡಾ.ಅಶ್ವಥ್ ನಾರಾಯಣ್ ಫೌಂಡೇಷನ್ ಹೊಂದಿದ್ದು, ಸಾರ್ವಜನಿಕರು ಅಭಿಯಾನದ ಉಪಯೋಗ ಪಡೆಯುವಂತೆ ಮನವಿ ಮಾಡಿದೆ. ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ನೇರವಾಗಿಯೇ ಶಾಲಾ ಕೇಂದ್ರಕ್ಕೆ ಆಗಮಿಸಬಹುದಾಗಿದ್ದು, ಆಧಾರ್ ಕಾರ್ಡ್ ಕಡ್ಡಾಯವಾಗಿ ಪ್ರದರ್ಶಿಸ ಬೇಕಿದೆ.

RELATED ARTICLES  ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭ.