ಕಾರವಾರ:‘ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಮೋದನೆಗೊಳ್ಳದ ನೌಕರರಿಗೂ ಇ– ಎಫ್‌ಎಮ್‌ಎಸ್ ಮೂಲಕವೇ ವೇತನ ಪಾವತಿ ಮಾಡಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಸಿ.ಎಲ್.ಗೌಡ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಆರ್‌ಡಿಪಿಆರ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಗ್ರಾಮ ಪಂಚಾಯ್ತಿ ನೌಕರರಿಗೆ ಇ– ಎಫ್‌ಎಮ್‌ಎಸ್ ಮೂಲಕ ವೇತನ ಪಾವತಿ ಮಾಡುವ ನಿರ್ಧಾರ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆ. ಆದರೆ ಅದು ಅನುಮೋದಿತ ಸಿಬ್ಬಂದಿಗೆ ಮಾತ್ರ ಅನ್ವಯವಾಗಲಿದೆ ಎಂದು ಅದರಲ್ಲಿ ಆದೇಶಿಸಿರುವುದು ಅಘಾತಕಾರಿಯಾಗಿದೆ. ಗ್ರಾಮ ಪಂಚಾಯ್ತಿ ನೌಕರರು ಕೂಡ ಕನಿಷ್ಠ ಕೂಲಿ ಪಡೆಯಲು ಅರ್ಹರಾಗಿದ್ದಾರೆ. ಹಾಗಾಗಿ ಅನುಮೋದಿತ ಸಿಬ್ಬಂದಿಗೆ ಮಾತ್ರ ಇ– ಎಫ್‌ಎಮ್‌ಎಸ್ ಮೂಲಕ ವೇತನ ಪಾವತಿ ಮಾಡುವ ಆದೇಶ ಎಲ್ಲರಿಗೂ ಕನಿಷ್ಠ ಕೂಲಿ ನಿಯಮಕ್ಕೆ ವಿರುದ್ಧವಾಗಿದೆ’ ಎಂದು ತಿಳಿಸಿದ್ದಾರೆ.

RELATED ARTICLES  ಅಪಘಾತ : ಕಾರಿನಲ್ಲಿದ್ದ ವ್ಯಕ್ತಿ ಧಾರುಣ ಸಾವು.

‘ನೇಮಕಗೊಂಡು ಕನಿಷ್ಟ 10 ವರ್ಷ ಸೇವೆ ಸಲ್ಲಿಸಿರುವ ಎಲ್ಲ ಸಿಬ್ಬಂದಿಯನ್ನು ಅನುಮೋದನೆ ಮಾಡಬೇಕು.ಜತೆಗೆ, ಕ್ಲರ್ಕ್, ಬಿಲ್ ಕಲೆಕ್ಟರ್‌ಗಳ ಬಡ್ತಿಗೆ ಇದ್ದ ಶೈಕ್ಷಣಿಕ ಅರ್ಹತೆಯನ್ನು ಎಸ್‌ಎಸ್‌ಎಲ್‌ಸಿಯಿಂದ ಪಿಯುಸಿಗೆ ಏರಿಕೆ ಮಾಡಿ ಸೂಚನೆ ಹೊರಡಿಸಲಾಗಿದೆ. ಇದು ಅನಾವಶರ್ಯಕವಾಗಿದ್ದು, ಇದರಿಂದಾಗಿ ರಾಜ್ಯಾದ್ಯಂತ ಸುಮಾರು 4 ಸಾವಿರ ನೌಕರರ ಬಡ್ತಿಗೆ ಅಡ್ಡಿಯಾಗಿದೆ’ ತಿಳಿಸಿದ್ದಾರೆ.

RELATED ARTICLES  ಮಾ. 26 ಕ್ಕೆ "ಸಾಗುತಿರಲಿ ಬಾಳ ಬಂಡಿ" ಕಾರ್ಯಕ್ರಮ

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ್ ಕೊಪ್ಪಿಕರ್, ಕಾರ್ಯದರ್ಶಿ ಟಿ.ಎಮ್.ಗುರುಬನ್ನವರ್, ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಯಮುನಾ ಗಾಂವ್ಕರ್ ಇದ್ದರು.