ಭಟ್ಕಳ: ತಾಲೂಕಿನ ಬೈಲೂರಿನ ಎಡಬಡು ರಸ್ತೆಯ ರೈಲ್ವೆ ಬ್ರಿಡ್ಜ್ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಂಗಳವಾರ ಮಧ್ಯಾಹ್ನ ಮುರುಡೇಶ್ವರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳು ಬೈಂದೂರು ತಾಲೂಕಿನ ಶಿರೂರು ಮೂಲದವರಾದ ಮಹಮ್ಮದ್ ಝಹೇರ ಹಾಗೂ ಅಜ್ಞಾನ ಅಹ್ಮದ್ ಎಂದು ತಿಳಿದು ಬಂದಿದೆ. ಇವರು ಬೈಲೂರು ಗ್ರಾಮದ ಎಡಬಡು ರಸ್ತೆಯ ರೈಲ್ವೆ ಬ್ರಿಡ್ಜ್ ಸಮೀಪ 8 ಸಾವಿರ ಮೌಲ್ಯದ 518 ಗ್ರಾಮ್ ತೂಕದ ಗಾಂಜಾ ಮಾದಕ ಪದಾರ್ಥವನ್ನು ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಇಟ್ಟು ಕೊಂಡು ಯಾರಿಗೋ ಮಾರಾಟ ಮಾಡುವ ಉದ್ದೇಶದಲ್ಲಿರುವಾಗ ಗಾಂಜ ಸಮೇತ ಆರೋಪಿಗಳನ್ನು ಮುರುಡೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ
ಆರೋಪಿಗಳಿಂದ ಒಟ್ಟು 518ಗ್ರಾಂ ಗಾಂಜಾ, 8000 ರೂಪಾಯಿ ನಗದನ್ನು ವಶಪಡಿಸಿಕೊಂದಿದ್ದಾರೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಅಳಿವಿನಂಚಿನಲ್ಲಿರುವ ಸಂತತಿಯ ಉಳಿವಿಗೆ ವಿಶಿಷ್ಠ ಪ್ರಯತ್ನ : ಹಳದೀಪುರದಲ್ಲಿ ಕಡಲು ಸೇರಿದ ಅಪರೂಪದ ಆಮೆ ಮರಿಗಳು