ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ಇಂದು ಕೇವಲ 42 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ. ಇಂದಿನ ಹೆಲ್ತ ಬುಲೆಟಿನ್ ಪ್ರಕಾರ ಯಾವುದೇ ಸಾವು ಸಂಭವಿಸಿಲ್ಲವಾಗಿದೆ.

ಕಾರವಾರದಲ್ಲಿ 7, ಅಂಕೋಲಾದಲ್ಲಿ 2, ಕುಮಟಾದಲ್ಲಿ 8, ಹೊನ್ನಾವರ 2, ಭಟ್ಕಳದಲ್ಲಿ 2, ಶಿರಸಿಯಲ್ಲಿ 9, ಸಿದ್ದಾಪುರದಲ್ಲಿ 2, ಯಲ್ಲಾಪುರದಲ್ಲಿ 5, ಮುಂಡಗೋಡ 3, ಹಳಿಯಾಳದಲ್ಲಿ 1, ಮತ್ತು ಜೋಯಿಡಾದಲ್ಲಿ 1 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 411 ಆಗಿದ್ದು, ಅವರಲ್ಲಿ 59 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 352 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

RELATED ARTICLES  ಸಿದ್ದಾಪುರದ ಬಾನ್ಕುಳಿ ಮಠದಲ್ಲಿ ನಡೆಯುತ್ತಿದೆ 'ಶಂಕರ ಪಂಚಮಿ'

ಕಾರವಾರ 0, ಅಂಕೋಲಾ‌ 0, ಕುಮಟಾ 16, ಹೊನ್ನಾವರ 05, ಭಟ್ಕಳ 4, ಶಿರಸಿ 14, ಸಿದ್ದಾಪುರ 0, ಯಲ್ಲಾಪುರ 0, ಮುಂಡಗೋಡ 2, ಹಳಿಯಾಳ 0, ಜೋಯ್ಡಾ 0 ಜನರು ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 41 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

ಉತ್ತರಕನ್ನಡಿಗರೇ ಹುಷಾರ್..!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೋವಿಡ್ ಸೋಂಕು ನಿಧಾನವಾಗಿ ಏರಿಕೆಯಾಗುತ್ತಿರುವುದು,‌ಜಿಲ್ಲೆಯ ಜನರಿಗೆ ಎಚ್ಚರಿಕೆ ಗಂಟೆಯಾಗಿದೆ. ಕಳೆದ‌ ಮೂರ್ನಾಲ್ಕು ದಿನಗಳ ಮಾಹಿತಿ ಗಮನಿಸಿದರೆ, ಇದು ಸ್ಪಷ್ಟವಾಗುತ್ತದೆ.

ಜುಲೈ 3 ರಂದು ಜಿಲ್ಲೆಯಲ್ಲಿ 34 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಜುಲೈ 4 ರಂದು ಸೋಂಕಿತ ಪ್ರಕರಣಗಳ ಸಂಖ್ಯೆ 19 ಕ್ಕೆ ಇಳಿಕೆಯಾಗಿತ್ತು. ಇದು ಕಳೆದ 3 ತಿಂಗಳ ಅವಧಿಯಲ್ಲಿ ದಾಖಲಾದ ಅತಿ ಕಡಿಮೆ ಸೋಂಕಿತ ಪ್ರಕರಣವಾಗಿತ್ತು. ಆದರೆ ಮೂರ್ನಾಲ್ಕು ದಿನಗಳಿಂದ ಸೋಂಕು ಸ್ವಲ್ಪ‌ಮಟ್ಟಿನ ಏರಿಕೆ ಕಾಣುತ್ತಿದೆ.

RELATED ARTICLES  ಪ್ರವಾಸಿ ತಾಣಗಳಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸುವಂತೆ ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಕೆ ಆದೇಶ

ಅನ್‌ಲಾಕ್ ಬಳಿಕ ಜನರ ಓಡಾಟ ಜಾಸ್ತಿಯಾಗುತ್ತಿದೆ. ಹೀಗಾಗಿ ಪೇಟೆಯ ತುಂಬೆಲ್ಲ ಜನಸಂದಣಿ ಹೆಚ್ಚುತ್ತಿದೆ. ಇದು ಹೀಗೆ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.