ಕುಮಟಾ : ಸಾಮಾಜಿಕ ಸೇವಾ ಕಾರ್ಯಗಳು ಸಂಸ್ಥೆ ಮತ್ತು ಸಮಾಜವನ್ನು ಬೆಸೆಯುವ ಕೊಂಡಿಯಂತೆ ಎಂದು ಲಾಯನ್ಸ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷೆ ವಿನಯಾ ಹೆಗಡೆ ಹೇಳಿದರು. ಅವರು ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.

ಕಳೆದ ವರ್ಷದಲ್ಲಿ ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಕರೊನಾ ಜಾಗ್ರತಿ ಸಂಬಂಧಿಸಿದ ಹಲವು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಾಗೆ ಗೋಕರ್ಣ ಅಶೋಕೆಯ ವಿದ್ಯಾಸಂಸ್ಥೆಯಲ್ಲಿ ಕುಟಿರ ನಿರ್ಮಿಸಿದ್ದು, ಮಹಿಳಾ ಸಬಲೀಕರಣ ಯೋಜನೆಯ ಹೊಲಿಗೆ ತರಬೇತಿಯ ಯೋಜನೆಯಡಿಯಲ್ಲಿ ಉಚಿತ ಹೊಲಿಗೆ ತರಬೇತಿ ಹಾಗೂ ಸರಕಾರಿ ಆಸ್ಪತ್ರೆಗೆ ವೀಲ್ ಚೆರ್ ಟ್ರಾಲಿ ಇವುಗಳನ್ನು ನೀಡಿದ್ದು ಉಲ್ಲೇಖನೀಯ ಎಂದರು.

RELATED ARTICLES  ಭಕ್ತಜನ ರಕ್ಷಕಿ ಎಂದೇ ಬಿರುದಾಂಕಿತ ಶ್ರೀ ಮಹಾಸತಿ ದೇವಿಗೆ ವಿಶೇಷ ದಂಡಾವಳಿ ಸಹಿತ ಪುಷ್ಪಾಲಂಕಾರ ಪೂಜೆ

ಕುಮಟಾ ಲಯನ್ಸ್ ಸೇವಾ ಭವನದಲ್ಲಿ ನಡೆದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಲಯನ್ ಅನಂತ ಕಾಮತ್ ,ಕಾರ್ಯದರ್ಶಿಯಾಗಿ ಹೃಷಿಕೇಶ್ ನಾಯಕ್, ಕೋಶಾಧಿಕಾರಿಯಾಗಿ ರವೀಂದ್ರ ನಾಯ್ಕ್ ಪ್ರಮಾಣ ವಚನ ಸ್ವೀಕರಿಸಿದರು. ಲಯನ್ ಮನೋಜ್ ಮನೆಕ್ ಪ್ರತಿಜ್ಞಾ ವಿಧಿ ಬೋಧಿಸಿದರು. ನಿಕಟಪೂರ್ವ ಪ್ರಾಂತಪಾಲರಾದ ಡಾ ಗಿರೀಶ್ ಕುಚಿನಾಡ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಕುಮಟಾ ಲಯನ್ಸ್ ಕ್ಲಬ್ಬಿನ ಚಟುವಟಿಕೆಗಳನ್ನು ಶ್ಲಾಘಿಸಿದರು.

RELATED ARTICLES  ಅ. 22 ಶನಿವಾರ ಕೊಂಕಣದ ಆವಾರದಲ್ಲಿ "ದೀಪಾವಳಿ ಮೇಳ"

ಈ ಸಂಧರ್ಭದಲ್ಲಿ ನಿಕಟಪೂರ್ವ ಕಾರ್ಯದರ್ಶಿ ಡಾ. ಎಸ್ ಎಸ್ ಹೆಗಡೆ, ಚಾರ್ಟರ್ ಚೇರ್ಮನ್ ರಾಮ್ ಪೈ ಹಾಗೂ ಚಾರ್ಟರ್ ಸದಸ್ಯರಾದ ಡಾ ವರ್ಣೆಕರ್, ಡಿ ಡಿ ಶೇಟ್ ಹಾಗೂ ಕುಮಟಾ,ಹೊನ್ನಾವರ,ಅಂಕೋಲಾ ಲಯನ್ಸ್ ಕ್ಲಬ್ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಲಯನ್ ಎಂ ಎನ್ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸ್ನೇಹಾ ಹೆಗಡೆ ಪ್ರಾರ್ಥನೆ ಮಾಡಿದರು.