ಬೆಂಗಳೂರು: ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಕೈ ತಪ್ಪಿ ಹೋಗಿದ್ದಕ್ಕೆ ಸಂಸದ ಸುರೇಶ್ ಅಂಗಡಿ ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೇ ಇದಕ್ಕೆ ರಾಜ್ಯ ಬಿಜೆಪಿ ನಾಯಕರುಗಳೆ ಕಾರಣ ಎಂದು ದೂರಿದ್ದಾರೆ.
ಉತ್ತರ ಕರ್ನಾಟಕದ ಭಾಗದ ನಾಯಕರುಗಳು ಸಚಿವರಾಗುವುದರ ಮೂಲಕ ಪ್ರಾತಿನಿಧ್ಯ ಸಿಗುತ್ತದೆ ಎಂಬ ಆಶಾಭಾವನೆಯಿತ್ತು. ಆದರೆ ರಾಜ್ಯ ನಾಯಕರುಗಳ ವೈಫಲ್ಯದಿಂದ ಈ ಅವಕಾಶ ಕೈ ತಪ್ಪಿದೆ. ಹಾಗೇಂದ ಮಾತ್ರಕ್ಕೆ ನಾನೇ ಸಚಿವನಾಗಬೇಕಿತ್ತು ಎಂದೇನಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ನಾಯಕರುಗಳಿದ್ದು ಅವರಲ್ಲಿ ಯಾರಾಗಿದ್ದರೂ ಸಂತಸ ತರುತ್ತಿತ್ತು ಎಂದಿದ್ದಾರೆ.
ನಮ್ಮ ಕ್ಷೇತ್ರದ ಜನ ನಾನು ಸಚಿವನಾಗುತ್ತೇನೆ ಎಂದು ನೀರಿಕ್ಷೆಯನ್ನು ಇಟ್ಟುಕೊಂಡಿದ್ದರು. ನನ್ನ ದುರದೃಷ್ಟ ಅವಕಾಶ ವಂಚಿತನಾದೆ ಎಂದು ಖೇದ ವ್ಯಕ್ತಪಡಿಸಿದರು.
ಉತ್ತರ ಕನ್ನಡ ಶಾಸಕ ಅನಂತ್ ಕುಮಾರ್’ಗೆ ಸಚಿವ ಸ್ಥಾನ ಲಭಿಸಿದ್ದು, ಸಂತಸ ತಂದಿದೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ನಾಯಕರುಗಳು ಉತ್ತರ ಕರ್ನಾಟಕ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಮನವರಿಕೆ ಮಾಡಿಕೊಂಡಬೇಕಿತ್ತು ಎಂದು ದೂರಿದರು.