ಭಟ್ಕಳ: ಅಲ್ಲಲ್ಲಿ ಕೇಳಿಬರುತ್ತಿದ್ದ ಗೋ ಕಳ್ಳತನ ಹಾಗೂ ಜಾನುವಾರುಗಳ ಕಳ್ಳಸಾಗಣೆ ಪ್ರಕರಣಗಳ ಜೊತೆಗೆ ಜಾನುವಾರು ಕಳ್ಳತನಕ್ಕೆ ಬಂದಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯಮೇಲೆ ಹಲ್ಲೆ ನಡೆದಿದೆ.

ಮುರುಡೇಶ್ವರದಲ್ಲಿ ಜಾನುವಾರು ಕಳ್ಳತನ ಮಾಡಲು ತಮ್ಮ ಜೊತೆ ಬರಲು ವ್ಯಕ್ತಿ ನಿರಾಕರಿಸಿದ್ದಕ್ಕೆ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

RELATED ARTICLES  ಇ-ಸ್ಟಾಂಪಿಂಗ್ ಸೇವಾ ಕೇಂದ್ರ ಉದ್ಘಾಟನೆ

ಈ ಸಂಬಂಧ ಮಾವಳ್ಳಿಯ ಬಸ್ತಿಮಕ್ಕಿ ನಿವಾಸಿ ಅಬ್ದುಲ್ ಶೇಖ್ ಪೂಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿತರನ್ನು ಮೊಹಮದ್ ಇಫ಼್ಜಾಲ್ ಹಾಗೂ ಅಬ್ರಾರ್ ಎಂದು ಗುರುತಿಸಲಾಗಿದೆ.

RELATED ARTICLES  ಕುಮಟಾ:ಹೊಲನಗದ್ದೆಯಲ್ಲಿ ಗಂಜಿ ಕೇಂದ್ರ.

ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ಕೈಗೊಂಡಿದ್ದಾರೆ.