ಕುಮಟಾ : ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನಲ್ಲಿ ವಿಧಾತ್ರಿ ಅಕಾಡೆಮಿ ಮಂಗಳೂರು ಇದರ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪಿ.ಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೌನ್ಸಿಲ್ ಆಫ್ ಆರ್ಕಿಟೆಕ್ಟರ್ ನಡೆಸಿದ 2021 ನೇ ಸಾಲಿನ ನಾಟಾ (ನ್ಯಾಷನಲ್ ಅಪ್ಪಿಟುಡ್ ಟೆಸ್ಟ್ ಇನ್ ಆರ್ಕಿಟೆಕ್ಟರ) ಪರೀಕ್ಷೆ ಬರೆದು, ಆ ಪರೀಕ್ಷೆಯಲ್ಲಿ ವಿವಿಧ ಹಂತದ ಸಾಧನೆ ಮಾಡಿರುತ್ತಾರೆ.
ನಾಟಾ ಮೊದಲ ಪರೀಕ್ಷೆಯಲ್ಲಿ ಮಾನಸಾ ವಿ. ನಾಯ್ಕ, ನಿಧಿ ಎಸ್. ಗಜಾನ್ಕರ್, ಮಾನಸಿ ವಿ. ಶಾನಭಾಗ, ನಿಸರ್ಗ ಆರ್. ನಾಯ್ಕ, ಎನ್. ಕೆ. ವೈಷ್ಣವಿ, ದೀಕ್ಷಾ ಎಸ್. ನಾಯ್ಕ, ನೇಹಾ ವಿ. ಶಾನಭಾಗ ಈ ಎಲ್ಲ ವಿದ್ಯಾರ್ಥಿಗಳು ಅರ್ಹತೆ ಗಳಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ವಿಧಾತ್ರಿ ಅಕಾಡೆಮಿಯ ಮುಖ್ಯಸ್ಥರಾದ ಶ್ರೀ ಗುರುರಾಜ ಶೆಟ್ಟಿ, ಪ್ರಾಚಾರ್ಯರಾದ ಶ್ರೀ ಮಹೇಶ ಉಪ್ಪಿನ್, ಮತ್ತು ಬೋಧಕ ಸಿಬ್ಬಂಧಿ ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರೆಲ್ಲರೂ ಅಭಿನಂದಿಸಿ ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.