ಅಂಕೋಲಾ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆಯಂದು ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಸಲ್ಲಿಸಿದ ಜಿಲ್ಲೆಯ ಪತ್ರಕರ್ತರಿಗೆ ನೀಡಲಾಗುವ ‘ಬಾರ್ಡೋಲಿ ಗೌರವ’ ಪ್ರಶಸ್ತಿಗೆ 2021 ರ ವರ್ಷಕ್ಕೆ ಹಿರಿಯ ಪತ್ರಕರ್ತ ಎಂ.ಜಿ.ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ.

ಮೂಲತಃ ಕುಮಟಾ ತಾಲೂಕಿನವರಾದ ಎಂ.ಜಿ.ನಾಯ್ಕ ಅವರು ಕಳೆದ ಹಲವು ವರ್ಷಗಳಿಂದ ವಿವಿಧ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಪ್ರಜಾವಾಣಿ ದಿನಪತ್ರಿಕೆಯ ಕುಮಟಾ ತಾಲೂಕಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

RELATED ARTICLES  ಮಹಿಳಾ ದಿನಾಚರಣೆ: ಕುಮಟಾ ರೋಟರಿಯಿಂದ ಸಾಧನಾ ಶಿಬಿರ

ಜು. 17 ರಂದು ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಕಾರ್ಯದರ್ಶಿ ಸುಭಾಷ ಕಾರೇಬೈಲ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಬಾರ್ಡೊಲಿ ಗೆಳೆಯರ ಬಳಗದ ತಂಡದವರಿಂದ ಸಂತ್ರಸ್ಥರಿಗೆ ಕೊಡುಗೆ

ಕ್ರಿಯಾಶೀಲ ವರದಿಗಾರಿಕೆ ಹಾಗೂ ಕಥೆಗಾರರಾಗಿಯೂ ಗುರುತಿಸಿಕೊಂಡಿರುವ ಇವರು, ಎಲ್ಲರ ಜೊತೆಗಿನ ಆತ್ಮೀಯ ಹಾಗೂ ಸ್ನೇಹಮಯಿಯಾಗಿ ಗುರುತಿಸಿಕೊಂಡವರು.