ಭಟ್ಕಳ: ಲಾರಿ ಮತ್ತು ಆಕ್ಟಿವಾ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಘೋರ ರೀತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.

ಭಟ್ಕಳ ತಾಲೂಕಾ ಪಂಚಾಯತ ಎದುರಿನ ರಾಷ್ಟ್ರಿಯ ಹೆದ್ದಾರಿಯಲ್ಲಿ ಆಕ್ಟಿವಾ ಬೈಕ್ ಹಾಗೂ ಲಾರಿ ನಡುವೆ ಈ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಬೈಕ್ ಸವಾರ ಜಾಮಿಯಾಬಾದ್ ಮದಿನಾ ಕಾಲೋನಿ ನಿವಾಸಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ, ಮೃತ ವ್ಯಕ್ತಿ ಅಬ್ದುಲ್ ಖಾದಿರ್ ಇಶ್ತಿಯಾಕ್, ಎಂದು ತಿಳಿದುಬಂದಿದೆ.

RELATED ARTICLES  ಸಹಾಯಧನ ಬೇಡ ಮಗನ ಸಾವಿಗೆ ನ್ಯಾಯ ಬೇಕು : ಪರೇಶ ತಂದೆ ಕಮಲಾಕರ ಮೇಸ್ತ

ಬೈಕ್ ಸವಾರ ರಸ್ತೆ ದಾಟುವೆ ವೇಳೆ ಈ ಅಪಘಾತ ಸಂಭವಿಸಿರಬಹುದೆoದು ಹೇಳಲಾಗುತ್ತಿದೆ. ಅಪಘಾತ ರಭಸಕ್ಕೆ ಲಾರಿ ಚಕ್ರ , ಆಕ್ಟೀವಾ ಬೈಕ್ ಸವಾರನ ತಲೆಯ ಮೇಲೆ ಹರಿದು ಹೋಗಿರುವುದರಿಂದ ತಲೆ ಭಾಗ ಛಿದ್ರ ಛಿದ್ರವಾಗಿದ್ದು , ಗುರುತು ಪತ್ತೆಹಚ್ಚಲಾಗದ ಸ್ಥಿತಿಯಲ್ಲಿ ರಸ್ತೆ ಮೇಲೆ ಶವ ಬಿದ್ದಿದೆ.

RELATED ARTICLES  ಯಡಿಯೂರಪ್ಪ ಆಗಮನಕ್ಕೆ ವಿರೋಧ

ಅಪಘಾತದ ವೇಳೆ ಆಕ್ಟಿವಾ ಬೈಕ್ ಸವಾರನು ಹೆಲ್ಮೆಟ್ ಧರಿಸಿದ್ದರು ಹೆಲ್ಮೆಟ್ ಪುಡಿ ಪಡಿಯಾಗಿದೆ. ಸ್ಥಳಕ್ಕೆ ನಗರ ಠಾಣಾ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.