ಕುಮಟಾ: ಬುಲೆರೋ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರನಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು, ಬುಲೆರೋ ವಾಹನ ಹೆದ್ದಾರಿ ಪಕ್ಕದ ಕಂದಕಕ್ಕೆ ಉರುಳಿದ ಘಟನೆ ತಾಲೂಕಿನ ದುಂಡಕುಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಸಂಭವಿಸಿದೆ.

ಶಿಳ್ಳೆಯ ಗಣಪತಿ ಕೇಶವ ಹೆಗಡೆ  ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಕುಮಟಾದಿಂದ ಮಿರ್ಜಾನ ಮಾರ್ಗವಾಗಿ ಸಂಚರಿಸುತ್ತಿರುವಾಗ ಈ ಘಟನೆ ನಡೆದಿದೆ. ಬುಲೆರೋ ವಾಹನದ ಚಾಲಕನ ನಿಷ್ಕಾಳಜಿ ಚಾಲನೆಯೇ ಅಪಾಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.

RELATED ARTICLES  ನಿವೃತ್ತ ಸೇನಾನಿ ಶ್ರೀ ನವೀನ್ ನಾಯ್ಕ ಅವರೊಂದಿಗೆ ಶ್ರೀ ಜಯದೇವ ಬಳಗಂಡಿಯವರು ನಡೆಸಿದ ವಿಶೇಷ ಸಂದರ್ಶನ.

ಘಟನೆಯಲ್ಲಿ ಬುಲೆರೋ ವಾಹನ ಹೆದ್ದಾರಿ ಪಕ್ಕದ ಕಂದಕಕ್ಕೆ ಉರುಳಿದೆ. ಗಾಯಗೊಂಡ ವ್ಯಕ್ತಿಯನ್ನು ಸರ್ಕಾರಿ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಇಸ್ರೊದಿಂದ ಜನವರಿ 10ರಂದು 31 ಉಪಗ್ರಹಗಳ ಉಡಾವಣೆ.

ಈ ಸ್ಥಳದಲ್ಲಿ‌ ಐಆರ್‌ಬಿ ಕಂಪೆನಿಯು ನಡೆಸಿದ ಅವೈಜ್ಞಾನಿಕ ಕಾಮಗಾರಿ ಹಾಗೂ ಸೂಚನಾ ಫಲಕ ಅಳವಡಿಸದಿರುವುದೇ ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ. ಅಲ್ಲದೇ, ಈ ಭಾಗದಲ್ಲಿ ಹಲವು ಸಾವು-ನೋವುಗಳು ಸಂಭವಿಸಿದರೂ ಅಧಿಕಾರಿಗಳು ಮಾತ್ರ ಮೌನವಹಿಸಿರುವುದು ಸ್ಥಳೀಯರ ಮತ್ತು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.