ಭಟ್ಕಳ: ರವಿವಾರ ಸಂಜೆ ಮುರುಡೇಶ್ವರ ದೇವಸ್ಥಾನದ ಬಲ ಭಾಗದ ಸಮುದ್ರ ತೀರದಲ್ಲಿ ಸಮುದ್ರದಲ್ಲಿ ಈಜಲು ಹೋದ ಪ್ರವಾಸಿಗರಿಬ್ಬರು ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ಯುವಕರನ್ನು ಮಣಿ ಮತ್ತು ನಾಗರಾಜ ಶಿವಮೊಗ್ಗದ ಮಾಸೂರು ರೋಡ್ ಶಿಕಾರಿಪುರ ನಿವಾಸಿಗಳು ಎಂದು ತಿಳಿದು ಬಂದಿದೆ.

ಇವರು ತನ್ನ 4 ಜನ ಸ್ನೇಹಿತರೊಂದಿಗೆ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದು ದೇವರ ದರ್ಶನ ಪಡೆದ್ದಾರೆ. ನಂತರ ಸಮುದ್ರಕ್ಕಿಯಲು ಹೋದವೇಳೆ ಹವಮಾನ ವೈಪರೀತ್ಯದಿಂದ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಇರುವ ಕಾರಣ ಪ್ರವಾಸಿಗರು ಸಮುದ್ರದಲ್ಲಿ ಇಳಿಯಬಾರದೆಂದು ನಿಷೇಧ ಹೇರಿದ್ದರು.

RELATED ARTICLES  ಮೋದಿಯವರನ್ನು ನಿಂದಿಸಿದ ರೋಷನ್ ಬೇಗ್ ಬಗ್ಗೆ ನಾಗರಾಜ ನಾಯಕ ತೊರ್ಕೆ ಪ್ರತಿಕ್ರಿಯೆ!

ಆದರೆ ಈ 4 ಜನ ಯುವಕರ ತಂಡ ದೇವಸ್ಥಾನದ ಬಲಭಾಗದಲ್ಲಿರುವ ಆರ್.ಎನ್.ಎಸ್ ಕಲ್ಯಾಣ ಮಂಟಪದ ಬದಿಯ ಸಮುದ್ರದಲ್ಲಿ ಮೋಜು ಮಸ್ತಿಗೆ ಈಜಲು ತೆರಳಿದ್ದು ಅಲೆಯ ಹೊಡೆತಕ್ಕೆ 4 ಜನ ಯುವಕರು ಕೊಚ್ಚಿಹೋಗಿದ್ದು ಅದರಲ್ಲಿ ಪ್ರವೀಣ ಮತ್ತು ನಾಗರಾಜ್ ಎನ್ನುವ ಇಬ್ಬರು ಯುವಕರು ಹಾಗೋ ಹೀಗೂ ಈಜಿಕೊಂಡು ದಡ ಸೇರಿ ಜೀವ ಉಳಿಸಿಕೊಂಡರೆ ಮಣಿ ಮತ್ತು ಬೇಕರಿ ಮಂಜುನಾಥ ಎನ್ನುವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

RELATED ARTICLES  ಕೈಕೊಟ್ಟ ಮಳೆರಾಯ, ಕಂಗಾಲಾಗಿದ್ದಾನೆ ಅನ್ನದಾತ!

ಮಂಜುನಾಥ ಮೃತ ದೇಹ ಅಲೆಯ ಹೊಡೆತಕ್ಕೆ ಸಮುದ್ರದ ದಡಕ್ಕೆ ಬಂದಿದ್ದು ಮಣಿ ಎನ್ನುವ ಯುವಕನ ಮೃತ ದೇಹ ಪೆತ್ತೆಯಾಗಿಲ್ಲವಾಗಿದೆ. ಈ ರೀತಿಯ ಅವಘಡಗಳು ಪದೇ ಪದೇ ಸಂಭವಿಸುತ್ತಲೇ ಇದ್ದರೂ ಜನತೆ ಮಾತ್ರ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರದ ಸಂಗತಿ ಎನ್ನಲಾಗಿದೆ.

ಪೊಲೀಸರು ಹಾಗೂ ಸ್ಥಳೀಯರು ಯಾವುದೇ ಕ್ರಮ ಕೈಗೊಂಡಿದ್ದರೂ ಪ್ರವಾಸಿಗರು ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಕಂಡುಬರುತ್ತಿದೆ. ಈ ಬಗ್ಗೆ ಸ್ಥಳೀಯವಾಗಿ ಸಾರ್ವಜನಿಕರಿಂದ ಬೇಸರ ವ್ಯಕ್ತವಾಗಿದೆ.