ಹೊನ್ನಾವರ : ಅಣ್ಣ ತಮ್ಮನ ನಡುವಿನ ಸಣ್ಣ ಜಗಳವೇ ದೊಡ್ಡದಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ವರದಿಯಾಗಿದೆ. ಹೊನ್ನಾವರದಲ್ಲಿ ನಡೆದಿರುವ ಈ ಘಟನೆ ಇಡೀ ಉತ್ತರಕನ್ನಡದ ಜನರನ್ನೇ ಬೆಚ್ಚಿ ಬೀಳಿಸಿದೆ.

ಕ್ಷುಲ್ಲಕ ಕಾರಣಕ್ಕೆ ಒಡಹುಟ್ಟಿದ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆ. ಈ ಘಟನೆ ನಡೆದಿರೋದು ಪಟ್ಟಣದ ಚರ್ಚ್ ರಸ್ತೆಯಲ್ಲಿ.

ಸಣ್ಣ ವಿಷಯಕ್ಕೆ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿತ್ತು. ಹೌದು, ಅಣ್ಣ ಕೆಲಸಕ್ಕೆ ಹೋಗುವುದಿಲ್ಲ, ಮನೆಯನ್ನು ನಾನೊಬ್ಬನೆ ನಿಭಾಯಿಸಬೇಕು. ನಾನೊಬ್ಬನೇ ದುಡಿಯಬೇಕು ಎಂಬ ವಿಷಯಕ್ಕೆ ಜಗಳವಾಗಿದೆ. ಇದೀಗ ಈ ಜಗಳ ಸಾವಿನಲ್ಲಿ ಅಂತ್ಯಕಂಡಿದೆ.

RELATED ARTICLES  ಸ್ವಚ್ಚ ನಿರ್ಮಲ ಕಡಲತೀರ ಅಭಿಯಾನ:ಮಕ್ಕಳದಿನಾಚರಣೆಯಂದು ಪಾಲ್ಗೊಂಡ ಮಕ್ಕಳು.

ಕೊಲೆಯಾದ ವ್ಯಕ್ತಿ, ಅರ್ಜುನ ಶಂಕರ ಮೇಸ್ತ. ಅಣ್ಣ ಕೃಷ್ಣ ಶಂಕರ ಮೇಸ್ತ ಸಾಯಿಸಿದ ಆರೋಪಿ. ಅಣ್ಣ ತಮ್ಮನನನ್ನು ಸಾಯಿಸಿ ಮಾಡಿ ಬೆಡ್ ಸೀಟ್ ನಿಂದ ಮುಚ್ಚಿ ಮನೆಗೆ ಬೀಗ ಹಾಕಿ ಹೊರಗಡೆ ಹೋಗಿದ್ದಾನೆ ‌ಎನ್ನಲಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

RELATED ARTICLES  ಅಂಗಡಿಗೆ ಕನ್ನ ಹಾಕಿದ ಕಳ್ಳರು : ಸಿ.ಸಿ ಟಿ.ವಿ ಯಲ್ಲಿ ಸೆರೆಯಾಯ್ತು ದೃಶ್ಯಾವಳಿ.

ಕೆಲಸಕ್ಕೆ ಹೋದ ತಾಯಿ ಕೆಲಸ ಮುಗಿಸಿ ಮನೆಗೆ ಬಂದು ಕಾದು ಕಾದು ಬಳಿಕ ಬೀಗ ಓಡೆದು ಒಳಗೆ ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ತಾಯಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ತಲೆ ಮರೆಸಿಕೊಂಡ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.