ಕುಮಟಾ : ತಾಲೂಕಿನ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಾದಶ್ರೀ ಕಲಾಕೇಂದ್ರದಲ್ಲಿ ನೆರವೇರಿತು. ರೋಟರಿ ಕ್ಲಬ್ ನ ಟಿಜಿಎಂಡಿಯವರು ಕಾರ್ಯಕ್ರಮ ಉದ್ಘಾಟಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ನಮೃತಾ ನಾಯಕ, ನೂತನ ಕಾರ್ಯದರ್ಶಿ ಸಿಲ್ಪಾ ಜೈನರಾಜ್ ಹಾಗೂ ನೂತನ ಖಜಾಂಚಿ ದೀಪಾ ನಾಯಕ ಅವರಿಗೆ ಅಧಿಕಾರ ಹಸ್ತಾಂತರ ನಡೆಯಿತು.

ಈ ಹಿಂದಿನಂತೆ ರೋಟರಿ ಕ್ಲಬ್ ನ ಎಲ್ಲ ರೀತಿಯ ಚಟುವಟಿಕೆಗಳನ್ನು ನಡೆಸುತ್ತಾ, ಸಾರ್ವಜನಿಕ ಸೇವೆಯತ್ತ ನನ್ನನ್ನು ತೊಡಗಿಸಿಕೊಳ್ಳುವುದಾಗಿ ನೂತನ ಅಧ್ಯಕ್ಷರಾದ ನಮ್ರತಾ ನಾಯಕ ತಿಳಿಸಿದರು. ಕುಮಟಾ ಸರ್ಕಾರಿ ಆಸ್ಪತ್ರೆಗೆ ಕೋಟಿ ರೂ ಸಮೀಪದ ಸಲಕರಣೆ ನೀಡುವ ಯೋಜನೆ ನಡೆದಿದ್ದು ಶ್ಲಾಘನೀಯ ಎಂದರು.

RELATED ARTICLES  ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರಕ್ಕೆ ಪ್ರತ್ಯೇಕ ನೀರಿನ ಸೌಲಭ್ಯ ಕಲ್ಪಿಸಬೇಕು: ಡಾ.ವಿನಾಯಕ ಭಟ್

ಕುಮಟಾ ರೋಟರಿ ಕ್ಲಬ್ ನ ಹಿಂದಿನ ಅಧ್ಯಕ್ಷರಾದ ಶಶಿಕಾಂತ ಕೋಳೆಕರ್ ಈಗಿನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ರೋಟರಿ ಪ್ರಮುಖರಾದ ಯೋಗೀಶ್ ಕಾಮತ್, ವಿನಾಯಕ ಹೆಗಡೆ ಹಾಗೂ ಇನ್ನಿತರರು ಹಾಜರಿದ್ದರು.

ಪಂ. ಶ್ರೀಕೃಷ್ಣ ಜಯದೇವ ರಾವ್ ಅವರಿಗೆ ಗೌರವ

ಈ ಸಂದರ್ಭದಲ್ಲಿ ಪಂ. ಶ್ರೀಕೃಷ್ಣ ಜಯದೇವ ರಾವ್ ಅವರನ್ನು ಈ ವರ್ಷದ ಪ್ರಮುಖ ದಾನಿಗಳೆಂದು ಗುರುತಿಸಿ ಗೌರವಿಸಲಾಯಿತು. ರೋಟರಿ ಸದಸ್ಯ ಹಾಗೂ ದಾನಿಗಳಾದ ಶ್ರೀ ವಸಂತ ರಾವ್ ಅವರ ತಂದೆಯಾಗಿರುವ ಪಂ. ಶ್ರೀಕೃಷ್ಣ ಜಯದೇವ ರಾವ್ ಸಂಗೀತ ಕ್ಷೇತ್ರದಲ್ಲಿ ಈಗಾಗಲೇ ಸಾಧನೆ ಮಾಡಿದವರು 96ರ ಇಳಿ ವಯಸ್ಸಿನಲ್ಲಿಯೂ ಅತ್ಯಂತ ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡವರು.

RELATED ARTICLES  ದೂರವಾಯ್ತು ಬಾಂಬ್ ಆತಂಕ : ಏನಿತ್ತು ಅಲ್ಲಿ?

ಸಂಗೀತ ಹಾಗೂ ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವುದರ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ರೋಟರಿ ಮೂಲಕ ಅನೇಕ ಸೇವಾಕಾರ್ಯಗಳಿಗೆ ದಾನವನ್ನು ನೀಡುತ್ತಿರುವ ಇವರು ಈ ವರ್ಷದ ಅತ್ಯುತ್ತಮ ದಾನಿಗಳು ಎನಿಸಿಕೊಂಡಿದ್ದಾರೆ.

ಪದಗ್ರಹಣ ಸಮಾರಂಭದಲ್ಲಿ ಅವರನ್ನು ಕುಟುಂಬ ಸಮೇತ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಪ್ರಮುಖರು ಹಾಗೂ ಸಾರ್ವಜನಿಕರು ಹಾಜರಿದ್ದರು.