ಭಟ್ಕಳ: ತಾಲೂಕಿನ ಮುಂಡಳ್ಳಿಯಲ್ಲಿ ವ್ಯಕ್ತಿಯೋರ್ವ ಗದ್ದೆ ಕೆಲಸ ಮಾಡಿ ಹೊಳೆಯಲ್ಲಿ ಕೈ ತೊಳೆಯಲು ಹೋಗಿದ್ದಾತ ನೀರು ಪಾಲಾದ ಘಟನೆ ನಡೆದಿದೆ. ನೀರಿನ ರಭಸ ಹೆಚ್ಚಿರುವುದರಿಂದ ಮೃತ ದೇಹ ಕೊಚ್ಚಿ ಹೋಗಿರಬಹುದೆಂದು ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಿ ಸ್ಥಳೀಯರು ಮರಳಿದ್ದಾರೆ ಎನ್ನಲಾಗಿದೆ.

RELATED ARTICLES  ಬಟ್ಟೆ ಅಂಗಡಿಗೆ ಹೋಗಿ ಬರುವುದಾಗಿ ಹೊರಟ ಯುವತಿ ನಾಪತ್ತೆ.

ಅವಘಡದಲ್ಲಿ ಮೃತನಾದ ವ್ಯಕ್ತಿಯನ್ನು  ಶ್ರೀಧರ ದೇವಾಡಿಗ ಎಂದು ಗುರುತಿಸಲಾಗಿದೆ. ಈತ ಗದ್ದೆ ಕೆಲಸ ಮುಗಿಸಿ ಕೈ ತೊಳೆಯಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದು ಕೊಚ್ಚಿಹೋಗಿದ್ದು ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

RELATED ARTICLES  ರಾಜ್ಯಮಟ್ಟದ ಪಿಪಿಟಿ ಪೈಪೋಟಿಯಲ್ಲಿ ಸಿವಿಎಸ್‌ಕೆಯ ಕೃತಿಕಾ ದ್ವಿತೀಯ.

ವ್ಯಕ್ತಿಯ ಮೃತ ದೇಹದ ಪತ್ತೆಗೆ ಸ್ಥಳೀಯರು‌, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಗಂಟೆ ನೀರಿನಲ್ಲಿ ಸತತವಾಗಿ ಶೋಧ ಕಾರ್ಯ ನಡೆಸಿದರು ಏನೂ ಪ್ರಯೋಜನವಾಗಿಲ್ಲ.